ಮಂಗಳವಾರ, ಅಕ್ಟೋಬರ್ 31, 2017

ಲೋಕ ಸಭಾ ಟಿವಿ ವಾಹಿನಿಯಲ್ಲಿ ಉದ್ಯೋಗಾವಕಾಶ

ಲೋಕ ಸಭಾ ಟಿವಿ ವಾಹಿನಿಯಲ್ಲಿ ಕೆಲಸ ಮಾಡಲು ಇಚ್ಛಿಸುವ ಮಾಧ್ಯಮ ಉತ್ಸಾಹಿಗಳಿಗೆ ಇಲ್ಲೊಂದು ಸದಾವಕಾಶ. ಒಟ್ಟು 30 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ನವೆಂಬರ್​ 13, 2017 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 
ನಿರೂಪಕ, ಕಾರ್ಯಕ್ರಮ ನಿರ್ಮಾಪಕ, ಮಾರುಕಟ್ಟೆ ನಿರ್ವಹಣಾಧಿಕಾರಿ, ವಿಡಿಯೋ ಎಡಿಟರ್​ ಸೇರಿದಂತೆ 30 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಗುತ್ತಿಗೆ ಆಧಾರದ ಉದ್ಯೋಗಾವಕಾಶ ಅಭ್ಯರ್ಥಿಗಳಿಗೆ ದೊರೆಯಲಿದೆ.

ಹುದ್ದೆಗಳ ವಿವರ 
ಹಿರಿಯ ಕಾರ್ಯಕ್ರಮ ನಿರ್ಮಾಪಕ: 04 ಹುದ್ದೆಗಳು 
ವೇತನ ಶ್ರೇಣಿ:ರೂ.75000-90000/- 
ವಿದ್ಯಾರ್ಹತೆ ಮಾನ್ಯತೆ ಪಡೆದ ವಿವಿಯಿಂದ ಪತ್ರಿಕೋದ್ಯಮದಲ್ಲಿ ಪದವಿ/ಡಿಪ್ಲೊಮಾ ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 12 ವರ್ಷಗಳ ಅನುಭವ 
ಅಪೇಕ್ಷಿತ: ಪಾರ್ಲಿಮೆಂಟ್ ಸುದ್ದಿಗಳನ್ನು ವರದಿ/ನಿರ್ವಹಿಸಿದ ಅನುಭವವಿರಬೇಕು

ನಿರ್ಮಾಪಕ: 03 ಹುದ್ದೆಗಳು 
ವೇತನ ಶ್ರೇಣಿ:ರೂ.60000-70000/- 
ವಿದ್ಯಾರ್ಹತೆ ಮಾನ್ಯತೆ ಪಡೆದ ವಿವಿಯಿಂದ ಪತ್ರಿಕೋದ್ಯಮದಲ್ಲಿ ಪದವಿ/ಡಿಪ್ಲೊಮಾ ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 10ವರ್ಷಗಳ ಅನುಭವ 
ಅಪೇಕ್ಷಿತ: ಪಾರ್ಲಿಮೆಂಟ್ ಸುದ್ದಿಗಳನ್ನು ವರದಿ/ನಿರ್ವಹಿಸಿದ ಅನುಭವವಿರಬೇಕು 

ಅತಿಥಿ ಸಂಯೋಜಕ:03 ಹುದ್ದೆಗಳು 

ವೇತನ ಶ್ರೇಣಿ:ರೂ.40000-50000/- 
ವಿದ್ಯಾರ್ಹತೆ ಮಾನ್ಯತೆ ಪಡೆದ ವಿವಿಯಿಂದ ಪದವಿ ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 5 ವರ್ಷಗಳ ಅನುಭವ 

ಸಹ ನಿರ್ಮಾಪಕ: 03 ಹುದ್ದೆಗಳು 

ವೇತನ ಶ್ರೇಣಿ:ರೂ.50000-60000/- 
ವಿದ್ಯಾರ್ಹತೆ ಮಾನ್ಯತೆ ಪಡೆದ ವಿವಿಯಿಂದ ಪದವಿ ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 08 ವರ್ಷಗಳ ಅನುಭವ ಅಪೇಕ್ಷಿತ:ಪಾರ್ಲಿಮೆಂಟ್ ಸುದ್ದಿಗಳನ್ನು ವರದಿ/ನಿರ್ವಹಿಸಿದ ಅನುಭವವಿರಬೇಕು ಸಹಾಯಕ 

ನಿರ್ಮಾಪಕ: 03 ಹುದ್ದೆಗಳು ವೇತನ ಶ್ರೇಣಿ:ರೂ.40000-50000/- ವಿದ್ಯಾರ್ಹತೆ ಮಾನ್ಯತೆ ಪಡೆದ ವಿವಿಯಿಂದ ಪದವಿ ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 05 ವರ್ಷಗಳ ಅನುಭವ ನಿರೂಪಕ ಕಂ ನಿರ್ಮಾಪಕ (ಇಂಗ್ಲಿಷ್)-02 ಹುದ್ದೆಗಳು ವೇತನ ಶ್ರೇಣಿ:ರೂ.70000-80000/- ವಿದ್ಯಾರ್ಹತೆ ಮಾನ್ಯತೆ ಪಡೆದ ವಿವಿಯಿಂದ ಪದವಿ ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 08 ವರ್ಷಗಳ ಅನುಭವ ಪ್ರೊಮೊ ಪ್ರೊಡ್ಯೂಸರ್: 01 ಹುದ್ದೆ ವೇತನ ಶ್ರೇಣಿ:ರೂ.60000-70000/- ವಿದ್ಯಾರ್ಹತೆ ಮಾನ್ಯತೆ ಪಡೆದ ವಿವಿಯಿಂದ ಪದವಿ ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 05 ವರ್ಷಗಳ ಅನುಭವ ವೀಡಿಯೋ ಎಡಿಟರ್-02 ಹುದ್ದೆಗಳು ವೇತನ ಶ್ರೇಣಿ:ರೂ.45000-55000/- ವಿದ್ಯಾರ್ಹತೆ ಮಾನ್ಯತೆ ಪಡೆದ ವಿವಿಯಿಂದ ಫಿಲಂ/ವೀಡಿಯೋ ಎಡಿಟಿಂಗ್‍ನಲ್ಲಿ ಪದವಿ/ಡಿಪ್ಲೊಮಾ ಸಂಬಂಧಿಸಿದ ಕ್ಷೇತ್ರದಲ್ಲಿ 5 ವರ್ಷ ಅನುಭವ ಪ್ರೊಡಕ್ಷನ್ ಅಸಿಸ್ಟೆಂಟ್ -02 ಹುದ್ದೆಗಳು ವೇತನ ಶ್ರೇಣಿ:ರೂ.30000-40000/- ವಿದ್ಯಾರ್ಹತೆ ಮಾನ್ಯತೆ ಪಡೆದ ವಿವಿಯಿಂದ ಪದವಿ ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 05 ವರ್ಷಗಳ ಅನುಭವ ಪ್ರೊಡಕ್ಷನ್ ಮ್ಯಾನೇಜರ್ (ಸ್ಟುಡಿಯೋ)-01 ಹುದ್ದೆ ವೇತನ ಶ್ರೇಣಿ:ರೂ.30000-40000/- ವಿದ್ಯಾರ್ಹತೆ ಮಾನ್ಯತೆ ಪಡೆದ ವಿವಿಯಿಂದ ಪದವಿ ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 05 ವರ್ಷಗಳ ಅನುಭವ ಮಾರ್ಕೆಟಿಂಗ್ ಮ್ಯಾನೇಜರ್-01 ಹುದ್ದೆ ವೇತನ ಶ್ರೇಣಿ:ರೂ.50000-60000/- ವಿದ್ಯಾರ್ಹತೆ ಮಾನ್ಯತೆ ಪಡೆದ ವಿವಿಯಿಂದ ಪದವಿ ಸಂಬಂಧಿಸಿದ ಕ್ಷೇತ್ರದಲ್ಲಿ 10 ವರ್ಷ ಅನುಭವ ಮ್ಯಾನೇಜರ್ ಫೈನಾನ್ಸ್: 01 ಹುದ್ದೆ ವೇತನ ಶ್ರೇಣಿ:ರೂ.30000-40000/- ವಿದ್ಯಾರ್ಹತೆ ಮಾನ್ಯತೆ ಪಡೆದ ವಿವಿಯಿಂದ ಎಂಬಿಎ ಸಂಬಂಧಿಸಿದ ಕ್ಷೇತ್ರದಲ್ಲಿ 05 ವರ್ಷ ಅನುಭವ ಮ್ಯಾನೇಜರ್ (ಅಡ್ಮಿನಿಸ್ಟ್ರೇಷನ್ ಅಂಡ್ ಹೆಚ್ ಆರ್): 01 ಹುದ್ದೆ ವೇತನ ಶ್ರೇಣಿ:ರೂ.30000-40000/- ವಿದ್ಯಾರ್ಹತೆ ಮಾನ್ಯತೆ ಪಡೆದ ವಿವಿಯಿಂದ ಎಂಬಿಎ ಸಂಬಂಧಿಸಿದ ಕ್ಷೇತ್ರದಲ್ಲಿ 05 ವರ್ಷ ಅನುಭವ ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಪಾಸ್‍ಪೋರ್ಟ್ ಗಾತ್ರದ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು ಕೊನೆಯ ದಿನಾಂಕ ಅರ್ಜಿ ಸಲ್ಲಿಸಲು 13-11-2017 ಕೊನೆಯ ದಿನಾಂಕ. ಆಯ್ಕೆ ಪ್ರಕ್ರಿಯೆ ಹುದ್ದೆಗೆ ತಕ್ಕ ವಿದ್ಯಾರ್ಹತೆ, ಅನುಭವದ ಆಧಾರದ ಮೇಲೆ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಸಲ್ಲಿಸಬೇಕಾದ ವಿಳಾಸ ಜಂಟಿ ನಿರ್ದೇಶಕರು ಲೋಕ ಸಭಾ ಕಾರ್ಯಾಲಯ ರೂಮ್ ನಂ. G-016 ಪಾರ್ಲಿಮೆಂಟ್ ಲೈಬ್ರರಿ ಬಿಲ್ಡಿಂಗ್ ನವದೆಹಲಿ-110001 ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ


ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ http://164.100.47.193/JRCell/Module/Notice/Recruitment%20LSTV%202017%20(1).pdf


ಇಸ್ರೊದಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೊ) ಯಲ್ಲಿ ಜೂನಿಯರ್‌ ರಿಸರ್ಚ್‌ ಫೆಲೊ, ರಿಸರ್ಚ್‌ ಅಸೋಸಿಯೇಟ್‌, ಟೆಕ್ನಿಕಲ್‌ ಅಸಿಸ್ಟೆಂಟ್‌ ಸೇರಿದಂತೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 84 ಹುದ್ದೆಗಳಿಗೆ ಅವಕಾಶವಿದ್ದು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ನವೆಂಬರ್‌ 17 ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಹುದ್ದೆಗಳ ವಿವರ

ಜೂನಿಯರ್‌ ರಿಸರ್ಚ್‌ ಫೆಲೊ: ಒಟ್ಟು 58 ಹುದ್ದೆಗಳು 
ವಿದ್ಯಾರ್ಹತೆ: ಸಂಬಂಧಪಟ್ಟ ವಿಷಯಗಳಲ್ಲಿ ಎಂಎಸ್ಸಿ, ಎಂಇ ಅಥವಾ ಎಂಟೆಕ್‌

ರಿಸರ್ಚ್‌ ಅಸೋಸಿಯೇಟ್‌: ಒಟ್ಟು 14 ಹುದ್ದೆಗಳು 
ವಿದ್ಯಾರ್ಹತೆ: ಪಿಎಚ್‌ಡಿ ಪಡೆದವರು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಫಿಸಿಕ್ಸ್‌, ಅಟೊಮೊಸ್ಪೆರಿಕ್‌ ಸೈನ್ಸ್‌, ಫಿಸಿಕಲ್‌ ಓಶಿಯಾನೋಗ್ರಫಿ, ವಾಟರ್‌ ರಿಸೋರ್ಸಸ್‌, ಹೈಡ್ರಾಲಜಿ, ಸಾಯಿಲ್‌ ಆ್ಯಂಡ್‌ ವಾಟರ್‌ ಎಂಜಿನಿಯರಿಂಗ್‌ ಸೇರಿದಂತೆ ಆಯಾ ವಿಭಾಗಕ್ಕೆ ಸಂಬಂಧಪಟ್ಟಂತೆ ಪಿಎಚ್‌ಡಿ ಪೂರ್ಣಗೊಳಿಸಿರಬೇಕು.

ಟೆಕ್ನಿಕಲ್‌ ಅಸಿಸ್ಟೆಂಟ್‌: 01 ಹುದ್ದೆ 
(ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಟೆಲಿಕಮ್ಯುನಿಕೇಷನ್‌, ಕಂಪ್ಯೂಟರ್‌ ಸೈನ್ಸ್‌ ಮತ್ತು ಮೆಕಾನಿಕಲ್‌ ವಿಭಾಗಗಳಲ್ಲಿ ತಲಾ ಒಂದು ಹುದ್ದೆ)

ವಿದ್ಯಾರ್ಹತೆ: ಆಯಾ ವಿಭಾಗಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಡಿಪ್ಲಮೊ (ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು)

ಸೈಂಟಿಫಿಕ್‌ ಅಸಿಸ್ಟೆಂಟ್‌-05 ಹುದ್ದೆಗಳು 
ವಿದ್ಯಾರ್ಹತೆ: ಫಿಸಿಕ್ಸ್‌ ಅಥವಾ ಅಪ್ಲೈಡ್‌ ಫಿಸಿಕ್ಸ್‌ ಹಾಗೂ ಮಲ್ಟಿಮೀಡಿಯಾ ಅಥವಾ ಅನಿಮೇಷನ್‌ನಲ್ಲಿ ಬಿಎಸ್ಸಿ ಪದವಿ

ಟೆಕ್ನಿಷಿಯನ್‌-03 ಹುದ್ದೆಗಳು 
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಜೊತೆಗೆ ಐಟಿಐ/ಎನ್‌ಟಿಸಿ/ಎನ್‌ಎಸಿ (ಇನ್‌ಫಾರ್ಮೇಶನ್‌ ಟೆಕ್ನಾಲಜಿ/ಇನ್‌ಫಾರ್ಮೇಶನ್‌ ಆ್ಯಂಡ್‌ ಕಮ್ಯುನಿಕೇಷನ್‌ ಟೆಕ್ನಾಲಜಿ/ ಇನ್‌ಫಾರ್ಮೇಶನ್‌ ಟೆಕ್ನಾಲಜಿ ಆ್ಯಂಡ್‌ ಎಲೆಕ್ಟ್ರಾನಿಕ್‌ ಸಿಸ್ಟಂ ಮೆಂಟೇನೆನ್ಸ್‌)
ಮೀಸಲಾತಿ ಹೊಂದಿದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಗರಿಷ್ಠ ವಯೋಮಿತಿ
* ಜೂನಿಯರ್‌ ರಿಸರ್ಚ್‌ ಫೆಲೊ ಹುದ್ದೆಗಳಿಗೆ ವಯೋಮಿತಿ ಗರಿಷ್ಠ 28 ವರ್ಷ
* ರಿಸರ್ಚ್‌ ಅಸೋಸಿಯೇಟ್‌, ಸೈಂಟಿಫಿಕ್‌ ಅಸಿಸ್ಟೆಂಟ್‌ ಮತ್ತು ಟೆಕ್ನಿಷಿಯನ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷ.
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-11-2017

ಹೆಚ್ಚಿನ ವಿವರಗಳಿಗೆ: www.isro.gov.in ಗಮನಿಸಿ

ಭಾನುವಾರ, ಅಕ್ಟೋಬರ್ 29, 2017

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ: ವಾಕ್ ಇನ್ ಇಂಟರ್ವ್ಯೂ

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ಪ್ರಾದೇಶಿಕ ನಿರ್ದೇಶನಾಲಯ (ದಕ್ಷಿಣ), ಬೆಂಗಳೂರು ಕಚೇರಿಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಹುದ್ದೆಗೆ ವಾಕ್ ಇನ್ ಇಂಟರ್ವ್ಯೂ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಅಸಿಸ್ಟೆಂಟ್ ಹುದ್ದೆಗೆ ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 06,2017ರಂದು ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.



ಹುದ್ದೆಗಳ ವಿವರ
ಹುದ್ದೆಯ ಹೆಸರು: ಅಸಿಸ್ಟಂಟ್ 

ವೇತನ ಶ್ರೇಣಿ: ರೂ.34,500/-, ತಿಂಗಳಿಗೆ.

ವಿದ್ಯಾರ್ಹತೆ
ಎಲ್ ಎಲ್ ಬಿ, ಎಲ್ ಎಲ್ ಎಂ, ಅಥವಾ ಪಿಜಿಡಿಎಲ್ ಪೂರ್ಣಗೊಳಿಸಿರಬೇಕು. ಹಾಗೂ ಬಾರ್ ಕೌನ್ಸಿಲ್ ನಿಂದ ಸರ್ಟಿಫಿಕೆಟ್ ಹೊಂದಿರಬೇಕು.

ಸಂದರ್ಶನ
* ಸಂದರ್ಶನವು ನವೆಂಬರ್ 6 ರಂದು ಬೆಳಗ್ಗೆ 10.00 ಗಂಟೆಗೆ ಸಿಪಿಸಿಬಿ ಕಚೇರಿಯಲ್ಲಿ ನಡೆಯಲಿದೆ.
* ಸಂದರ್ಶನಕ್ಕೆ ಹಾಜರಾಗುವಾಗ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಲಗತ್ತಿಸಿದ, ಸ್ವಯಂ ದೃಢೀಕರಿಸಿದ ಟೈಪ್ ಮಾಡಿದ ಅಥವಾ ಕೈಯಿಂದ ಬರೆದ ಅರ್ಜಿಯನ್ನು ತರತಕ್ಕದ್ದು.

ಸಂದರ್ಶನ ನಡೆಯುವ ಸ್ಥಳ

CPCB, Regional Directorate (South). " isarga Bhawan·I st Floor, Thimmaiab Road. 7 'D' cross, Shivanagar, Bengaluru-560 079.

ಹೆಚ್ಚಿನ ವಿವರಗಳಿಗಾಗಿ ಶೀಮತಿ ಅಂಜನಾ ಕುಮಾರಿ ವಿ. ಎನ್ವಿರಾನ್ಮೆಂಟಲ್ ಇಂಜಿನಿಯರ್ (ಮೊಬೈಲ್ ಸಂಖ್ಯೆ: 9916355576, e-mail: anjana.anupama@gmail.com) ಸಂಪರ್ಕಿಸಲು ಕೋರಲಾಗಿದೆ.

ಶುಕ್ರವಾರ, ಅಕ್ಟೋಬರ್ 27, 2017

ಪ್ಯಾರಾಮೆಡಿಕಲ್ ಕೋರ್ಸ್: ವಾಕ್ ಇನ್ ಇಂಟರ್ವ್ಯೂ

ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ನಲ್ಲಿ 2017-18 ರ ಶೈಕ್ಷಣಿಕ ಸಾಲಿನ ಅರೆ ವೈದ್ಯಕೀಯ ಕೋರ್ಸುಗಳಿಗೆ ದಾಖಲಾಗಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ದಿನಾಂಕ 28-10-2017 ಹಾಗು 30-10-2017 ರಂದು ನೇರ ಸಂದರ್ಶನ ನಡೆಯುತ್ತಿದ್ದು ಅರ್ಹ ಅಭ್ಯರ್ಥಿಗಳು ನೇರವಾಗಿ ಆಸ್ಪತ್ರೆಯ ಅಧೀಕ್ಷಕರು ಸಾರ್ವಜನಿಕ ಆಸ್ಪತ್ರೆ, ಜಯನಗರ ಇವರನ್ನು ಬೆಳಗ್ಗೆ 10.00 ಗಂಟೆಯಿಂದ ಸಂಜೆ 4.00 ರವರೆಗೆ ನೇರ ಸಂದರ್ಶನಕ್ಕೆ ಭೇಟಿ ನೀಡಬಹುದು.


ಕೋರ್ಸ್ ಮತ್ತು ಖಾಲಿ ಸೀಟುಗಳ ವಿವರ1. ಡಿಪ್ಲೋಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ -02 ಸೀಟು (ಎಸ್.ಸಿ-01, ಒಬಿಸಿ-01)
2. ಡಿಪ್ಲೋಮ ಇನ್ ಮೆಡಿಕಲ್ ಎಕ್ಸ್ ರೇ ಟೆಕ್ನಾಲಜಿ-07ಸೀಟು (ಜಿಎಂ-03 , ಎಸ್.ಸಿ-01, ಒಬಿಸಿ-02, ಹೈ-ಕ ಜಿಎಂ-01)
3.ಡಿಪ್ಲೋಮ ಇನ್ ಹೆಲ್ತ್ ಇನ್ಸ್ಪೆಕ್ಟರ್ -07ಸೀಟು (ಜಿಎಂ-01 , ಎಸ್.ಸಿ-01,ಎಸ್.ಟಿ-01, ಒಬಿಸಿ-03, ಹೈ-ಕ ಜಿಎಂ-01)
4. ಡಿಪ್ಲೋಮ ಇನ್ ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ-12ಸೀಟು (ಜಿಎಂ-05 , ಎಸ್.ಸಿ-02,ಎಸ್.ಟಿ-01, ಒಬಿಸಿ-03, ಹೈ-ಕ ಜಿಎಂ-01)
5. ಡಿಪ್ಲೋಮ ಇನ್ ಡಯಾಲಿಸಿಸ್ ಟೆಕ್ನಾಲಜಿ--01ಸೀಟು (ಜಿಎಂ-01)
6. ಡಿಪ್ಲೋಮ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ-06ಸೀಟು (ಜಿಎಂ-02 , ಎಸ್.ಸಿ-01,ಎಸ್.ಟಿ-01, ಒಬಿಸಿ-01, ಹೈ-ಕ ಜಿಎಂ-01)
7. ಡಿಪ್ಲೋಮ ಇನ್ ಆಪ್ತಾಲ್ಮಿಕ್ ಟೆಕ್ನಾಲಜಿ-06ಸೀಟು (ಜಿಎಂ-02 , ಎಸ್.ಸಿ-01,ಎಸ್.ಟಿ-01, ಒಬಿಸಿ-01, ಹೈ-ಕ ಜಿಎಂ-01)

ವಿದ್ಯಾರ್ಹತೆ
ಕ್ರಮ ಸಂಖ್ಯೆ 4 ಅನ್ನು ಹೊರತುಪಡಿಸಿ ಉಳಿದ ಎಲ್ಲ ಕೋರ್ಸ್ಗಳಿಗೆ ಪಿಯುಸಿ (ವಿಜ್ಞಾನ)/ ತತ್ಸಮಾನ ಪರೀಕ್ಷೆ (ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ) ವಿಷಯಗಳಲ್ಲಿ ಅಥವಾ ಎಸ್.ಎಸ್.ಎಲ್.ಸಿ/ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಕ್ರಮ ಸಂಖ್ಯೆ 4 ರ ಕೋರ್ಸಿಗೆ ಪಿಯುಸಿ (ಸೈನ್ಸ್, ಕಾಮರ್ಸ್, ಆರ್ಟ್ಸ್)/ ತತ್ಸಮಾನ ವಿದ್ಯಾರ್ಹತೆ ಅಥವಾ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದವರು ಆಂಗ್ಲ ಕಿರಿಯ ಬೆರಳಚ್ಚು ಅಥವಾ ಬೇಸಿಕ್ ಕಂಪ್ಯೂಟರ್ ತರಬೇತಿ ಹೊಂದಿರಬೇಕು.

ಅರ್ಜಿದಾರರು ಕನಿಷ್ಠ 07 ವರ್ಷಗಳು ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು.

ನೇರ ಸಂದರ್ಶನಕ್ಕೆ ಹಾಜರಾಗುವ ಸಮಯದಲ್ಲಿ ಎಲ್ಲ ಅಗತ್ಯ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ತರತಕ್ಕದ್ದು.

ಕೋರ್ಸಿನ ಅವಧಿ:
ಪಿಯುಸಿ ಅಭ್ಯರ್ಥಿಗಳಿಗೆ 2 ವರ್ಷಗಳು ಮತ್ತು ಎಸ್.ಎಸ್.ಎಲ್.ಸಿ ಅಭ್ಯರ್ಥಿಗಳಿಗೆ 3 ವರ್ಷಗಳು.

ವಯೋಮಿತಿ
ದಿನಾಂಕ 30-10-2017 ಕ್ಕೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷಗಳು. ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 40 ವರ್ಷಗಳು ಮೀರಿರಬಾರದು

ಅಭ್ಯರ್ಥಿಗಳ ಆಯ್ಕೆ
ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಮತ್ತು ಪ್ರವರ್ಗಗಳ ಆಧಾರದ ಮೇರೆಗೆ ಆಯ್ಕೆ ಮಾಡಲಾಗುವುದು.

ಮಂಗಳವಾರ, ಅಕ್ಟೋಬರ್ 24, 2017

ಯುಪಿಎಸ್ಸಿ: 64 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ ) ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು 64 ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.


ಹುದ್ದೆಗಳ ವಿವರ
* ಡೆಪ್ಯುಟಿ ಕಂಟ್ರೋಲರ್ ಆಫ್ ಎಕ್ಸ್ಪ್ಲೋಸಿವ್ (ಮಿನಿಸ್ಟ್ರಿ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ )-17 ಹುದ್ದೆಗಳು
* ಸೈಂಟಿಫಿಕ್ ಆಫೀಸರ್ (ಎಲೆಕ್ಟ್ರಿಕಲ್)(ಮಿನಿಸ್ಟ್ರಿ ಆಫ್ ಕನ್ಸ್ಯೂಮರ್ ಅಫೇರ್ಸ್, ಫುಡ್ ಅಂಡ್ ಪಬ್ಲಿಕ್ ಡಿಸ್ಟ್ರಿಬ್ಯುಷನ್)-03 ಹುದ್ದೆಗಳು

* ಜ್ಯೂನಿಯರ್ ಟೆಕ್ನಿಕಲ್ ಆಫೀಸರ್, ಇನ್ಟೆಗ್ರೇಟೆಡ್ ಹೆಡ್ ಕ್ವಾರ್ಟರ್ಸ್ (ನೇವಿ), ಮಿನಿಸ್ಟ್ರಿ ಆಫ್ ಡಿಫೆನ್ಸ್-03 ಹುದ್ದೆಗಳು
* ಸ್ಪೆಷಲಸ್ಟ್ ಗ್ರೇಡ್-3 (ಕಾರ್ಡಿಯಾಲಜಿ), ಮಿನಿಸ್ಟ್ರಿ ಆಫ್ ಹೆಲ್ತ್ ಅಂಢ್ ಫ್ಯಾಮಿಲಿ ವೆಲ್ಫೇರ್-01 ಹುದ್ದೆ
* ಸ್ಪೆಷಲಸ್ಟ್ ಗ್ರೇಡ್-3 ಅಸಿಸ್ಟೆಂಟ್ ಪ್ರೊಫೆಸರ್ (ಇಎನ್ ಟಿ),ಮಿನಿಸ್ಟ್ರಿ ಆಫ್ ಹೆಲ್ತ್ ಅಂಢ್ ಫ್ಯಾಮಿಲಿ ವೆಲ್ಫೇರ್-03 ಹುದ್ದೆಗಳು
* ಸ್ಪೆಷಲಸ್ಟ್ ಗ್ರೇಡ್-3 ಅಸಿಸ್ಟೆಂಟ್ ಪ್ರೊಫೆಸರ್ (ಪ್ರಿವೆಂಟಿವ್ ಅಂಡ್ ಸೋಷಿಯಲ್ ಮೆಡಿಸಿನ್),ಮಿನಿಸ್ಟ್ರಿ ಆಫ್ ಹೆಲ್ತ್ ಅಂಢ್ ಫ್ಯಾಮಿಲಿ ವೆಲ್ಫೇರ್-10 ಹುದ್ದೆಗಳು.
* ಸ್ಪೆಷಲಸ್ಟ್ ಗ್ರೇಡ್-೩ ಅಸಿಸ್ಟೆಂಟ್ ಪ್ರೊಫೆಸರ್ (ಸೈಕ್ಯಾಟ್ರಿ),ಮಿನಿಸ್ಟ್ರಿ ಆಫ್ ಹೆಲ್ತ್ ಅಂಢ್ ಫ್ಯಾಮಿಲಿ ವೆಲ್ಫೇರ್-07 ಹುದ್ದೆಗಳು.
* ಡೆಪ್ಯುಟಿ ಡೈರೆಕ್ಟರ್ (ಸೇಫ್ಟಿ)(ಎಲೆಕ್ಟ್ರಿಕಲ್), ಡೈರೆಕ್ಟೊರೇಟ್ ಜನರಲ್ ಫ್ಯಾಕ್ಟರಿ ಅಡ್ವೈಸ್ ಸರ್ವಿಸ್ ಅಂಡ್ ಲೇಬರ್ ಇನ್ಸ್ಟಿಟ್ಯುಟ್, ಮಿನಿಸ್ಟ್ರಿ ಆಫ್ ಲೇಬರ್ ಅಂಡ್ ಎಂಪ್ಲಾಯ್ಮೆಂಟ್-02 ಹುದ್ದೆಗಳು
* ಸಬ್ ರೀಜನಲ್ ಎಂಪ್ಲಾಯ್ಮೆಂಟ್ ಆಫೀಸರ್, ಡೈರೆಕ್ಟೊರೇಟ್ ಜನರಲ್ ಆಫ್ ಎಂಪ್ಲಾಯ್ಮೆಂಟ್, ಮಿನಿಸ್ಟ್ರಿ ಆಫ್ ಲೇಬರ್ ಅಂಡ್ ಎಂಪ್ಲಾಯ್ಮೆಂಟ್-08 ಹುದ್ದೆಗಳು
* ಅಸಿಸ್ಟೆಂಟ್ ಡೈರೆಕ್ಟರ್ (ಫಿಸಿಕಲ್ ಎಜುಕೇಷನ್), ಡಾ.ಬಿ.ಆರ್.ಅಂಬೇಡ್ಕರ್ ಇನ್ಸ್ಟಿಟ್ಯುಟ್ ಆಫ್ ಟೆಕ್ನಾಲಜಿ, ಅಂಡಮಾನ್ ಅಂಡ್ ನಿಕೋಬಾರ್ ಅಡ್ಮಿನಿಸ್ಟ್ರೇಷನ್, ಪಹರ್ಗಾನ್, ಪೋರ್ಟ್ ಬ್ಲೇರ್-01 ಹುದ್ದೆ ಅರ್ಜಿ ಶುಲ್ಕ

ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.25/-
ಎಸ್.ಸಿ/ಎಸ್.ಟಿ/ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಪ್ರಮುಖ ದಿನಾಂಕ
* ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-11-2017
* ಆನ್ಲೈನ್ ಅರ್ಜಿ ಪ್ರಿಂಟ್ ಪಡೆಯಲು ಕೊನೆಯ ದಿನಾಂಕ: 03-11-2017

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ http://www.upsc.gov.in/sites/default/files/Advt_No_19_2017_Engl_0.pdf

ಜೆಇಇ-ಮುಖ್ಯ ಪರೀಕ್ಷೆ 2018: ಏಪ್ರಿಲ್‌ 8ರಂದು ನಡೆಸಲು ತೀರ್ಮಾನ

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 2018ರ ಜಂಟಿ ಪ್ರವೇಶ ಪರೀಕ್ಷೆ (ಜೆಇಇ-ಮುಖ್ಯ)ಯು ಏಪ್ರಿಲ್‌ 8ರಂದು ಮತ್ತು ಜೆಇಇ-ಅಡ್ವಾನ್ಸ್ಡ್‌ 2018ರ ಮೇ 20ರಂದು ನಡೆಸಲು ತೀರ್ಮಾನಿಸಲಾಗಿದೆ.

ಈ ಬಾರಿಯ ಪರೀಕ್ಷೆಯನ್ನು ಐಐಟಿ ಕಾನ್ಪುರ್ ನಡೆಸುತ್ತಿದ್ದು, ದೇಶದ 104 ನಗರಗಳಲ್ಲಿ ಮತ್ತು ಹೊರದೇಶದ 9 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ.

ಒಟ್ಟು 24,323 ಸೀಟುಗಳನ್ನು ಈ ಪರೀಕ್ಷೆ ಮೂಲಕ ಹಂಚಿಕೆ ಮಾಡಲಾಗುವುದು. ಕಳೆದ ವರ್ಷ 12 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಜೆ ಇ ಇ ಪರೀಕ್ಷೆ ತೆಗೆದುಕೊಂಡಿದ್ದರು.


ಜೆಇಇಗಾಗಿ ಆನ್‌ಲೈನ್‌ ಮೂಲಕ ನಡೆಯುವ ಪ್ರವೇಶ ಪರೀಕ್ಷೆಯ ದಿನಾಂಕ, ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆ ಮತ್ತು ಇತರ ವಿವರಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜೆ ಇ ಇ ಪರೀಕ್ಷೆಗಳು
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ ಮತ್ತು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ), ನವದೆಹಲಿ, ಸಹಯೋಗದೊಂದಿಗೆ ಆಯೋಜಿಸುವ ಜಂಟಿ ಪ್ರವೇಶ ಪರೀಕ್ಷೆ.

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (ಎನ್‌ಐಟಿ) ಮತ್ತು ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಗಾಗಿ ಸಿಬಿಎಸ್‌ಇಯು ಪ್ರತಿ ವರ್ಷ ಜೆಇಇ (ಮುಖ್ಯ) ನಡೆಸುತ್ತದೆ.

ವೃತ್ತಿಪರ ಕೋರ್ಸುಗಳಿಗೆ ಸೇರುವ ವಿದ್ಯಾರ್ಥಿಗಳಲ್ಲಿ ಒತ್ತಡ ಕಡಿಮೆಮಾಡಲು ಹಾಗು ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಬಯಸುವವರಿಗೆ ಜೆ ಇ ಇ ಪರೀಕ್ಷೆಗಳು ಸಹಕಾರಿಯಾಗಿವೆ. ಜೆ.ಇ.ಇ. ಪರೀಕ್ಷೆಗಳು ರಾಷ್ಟ್ರ ಮಟ್ಟದ ತಾಂತ್ರಿಕ ವಿದ್ಯಾಸಂಸ್ಥೆಗಳಿಗೆ ಪ್ರವೇಶವನ್ನು ಪಡೆಯಲು ತೆಗೆದುಕೊಳ್ಳಬೇಕಾದಂಥವು.

ಐ.ಐ.ಟಿ., ಎನ್.ಐ.ಟಿ., ಐ.ಎಸ್.ಇ.ಆರ್., ಮುಂತಾದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಶುದ್ಧ ವಿಜ್ಞಾನವನ್ನೋ ಅಥವಾ ಅನ್ವಯ ವಿಜ್ಞಾನವನ್ನೋ ಅಧ್ಯಯನ ಮಾಡಲು ಜೆ.ಇ.ಇ. ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯಬೇಕು. ಜೆ.ಇ.ಇ. ಆಯ್ಕೆ ಪರೀಕ್ಷೆಗಳು ತಮ್ಮದೇ ಆದ ಪಠ್ಯವನ್ನು ಆಧರಿಸಿರುತ್ತವೆ.

ಈ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದವರು ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಪ್ರವೇಶಾತಿಗಾಗಿ ಈ ಸಂಸ್ಥೆಗಳ ಜಂಟಿ ಪ್ರವೇಶಾತಿ ಮಂಡಳಿ (ಜೆಎಬಿ) ನಡೆಸುವ ಜೆಇಇ-ಅಡ್ವಾನ್ಸ್ಡ್‌ ಬರೆಯಲು ಅರ್ಹತೆ ಗಳಿಸುತ್ತಾರೆ.

ಮಂಗಳೂರು ಒ ಎನ್ ಜಿ ಸಿ: 33 ಇಂಜಿನಿಯರ್ಗಳ ನೇಮಕಾತಿ

ಭಾರತದ ಅತಿದೊಡ್ಡ ತೈಲ ಹಾಗೂ ಅನಿಲ ಉತ್ಪಾದನಾ ಕಂಪನಿ ಒಎನ್ ಜಿಸಿ (ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್) ಮಂಗಳೂರು ಪೆಟ್ರೋಕೆಮಿಕಲ್ ಲಿಮಿಟೆಡ್ ನಲ್ಲಿ ಖಾಲಿ ಇರುವ 33 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಕಾರ್ಯನಿರ್ವಾಹಕ ಹುದ್ದೆಗೆ ಆನ್ ಲೈನ್ ಮೂಲಕ ಭಾರತದಾದ್ಯಂತ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ದಿನಾಂಕ ನವೆಂಬರ್ 18, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.



ಹುದ್ದೆಗಳ ವಿವರ
ಹುದ್ದೆ: ಕಾರ್ಯನಿರ್ವಾಹಕ

* ಕೆಮಿಕಲ್ ವಿಭಾಗ-22 ಹುದ್ದೆಗಳು

* ಇನ್ಸ್ಟ್ರುಮೆಂಟೇಷನ್ ವಿಭಾಗ-08 ಹುದ್ದೆಗಳು
* ಕೆಮಿಸ್ಟ್-02 ಹುದ್ದೆಗಳು

* ಇನ್ಫಾರ್ಮಶನ್ ಟೆಕ್ನಾಲಜಿ-01 ಹುದ್ದೆ

ವೇತನ ಶ್ರೇಣಿ: ವಾರ್ಷಿಕವಾಗಿ 4 ಲಕ್ಷ ರು.

ವಯೋಮಿತಿ
ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಬಿಇ, ಬಿ-ಟೆಕ್ ಪೂರ್ಣಗೊಳಿಸರಬೇಕು. 2017ರ ಗೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಅರ್ಜಿ ಸಲ್ಲಿಕೆ
ಅರ್ಜಿಗಳನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಧಿಕೃತ ವೆಬ್ಸೈಟ್ ವಿಳಾಸ www.ompl.co.in ಗೆ ಭೇಟಿ ನೀಡಿ.
"Recruitment through GATE-2017: Advt.No.1/2017". ಲಿಂಕ್ ಮೇಲೆ ಕ್ಲಿಕ್ ಮಾಡಿ

ಅರ್ಜಿ ಶುಲ್ಕ
* ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.750/-
* ಎಸ್.ಸಿ/ಎಸ್.ಟಿ/ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಆಯ್ಕೆ ವಿಧಾನ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೆರಿಟ್ ಆಧಾರದ ಮೇಲೆ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು
1 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-11-2017
2 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 18-11-2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ http://eapplicationonline.com/OMPL2017/Document/Advertisement.pdf

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟ್ರಾಪಿಕಲ್‌ ಮಿಟಿಯೊರೊಲೊಜಿ ವಿವಿಧ ಹುದ್ದೆಗಳ ನೇಮಕಾತಿ

ಭಾರತೀಯ ಮುಂಗಾರು ಮತ್ತು ಹವಾಮಾನ ಬದಲಾವಣೆ ಕುರಿತು ಸಂಶೋಧನೆ ನಡೆಸುವ, ದೇಶದ ಪ್ರಮುಖ ಸಂಸ್ಥೆಯಾಗಿರುವ ಭೂವಿಜ್ಞಾನ ಸಚಿವಾಲಯದಡಿಯಲ್ಲಿ ಬರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟ್ರಾಪಿಕಲ್‌ ಮೆಟೊರೊಲಾಜಿಯಲ್ಲಿ (ಪುಣೆ) ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 79 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆಗಳ ವಿವರ
* ಪ್ರಾಜೆಕ್ಟ್ ಸೈಂಟಿಸ್ಟ್‌ ಡಿ-10
* ಪ್ರಾಜೆಕ್ಟ್ ಸೈಂಟಿಸ್ಟ್‌ ಸಿ-20
* ಪ್ರಾಜೆಕ್ಟ್ ಸೈಂಟಿಸ್ಟ್‌ ಬಿ-26

* ವಿಸಿಟಿಂಗ್‌ ಸೈಂಟಿಸ್ಟ್‌-1
* ಜೂನಿಯರ್‌ ಸೈಂಟಿಫಿಕ್‌ ಅಸಿಸ್ಟೆಂಟ್‌-01
* ಪ್ರಾಜೆಕ್ಟ್ ಮ್ಯಾನೇಜರ್‌-01
* ಪ್ರಾಜೆಕ್ಟ್ ಅಸಿಸ್ಟೆಂಟ್‌-09
* ಯುಡಿಸಿ-08
* ಸೆಕ್ಷನ್‌ ಆಫೀಸರ್‌-02
* ಕಂಪ್ಯೂಟರ್‌ ಅಪ್ಲಿಕೇಷನ್‌ ಸಪೋರ್ಟಿಂಗ್‌ ಸೈಂಟಿಸ್ಟ್‌-1 ಹುದ್ದೆ

ಅರ್ಜಿ ಸಲ್ಲಿಕೆ
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಇಂದಿನಿಂದ (ಅಕ್ಟೋಬರ್‌ 23, 2017) ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನವೆಂಬರ್‌ 19, 2017 ಕೊನೆಯ ದಿನಾಂಕವಾಗಿದೆ.

ಗರಿಷ್ಠ ವಯೋಮಿತಿ
ಸೈಂಟಿಸ್ಟ್‌ ಡಿ-50 ವರ್ಷ , ಸೈಂಟಿಸ್ಟ್‌ ಸಿ-40 ವರ್ಷ, ಸೈಂಟಿಸ್ಟ್‌ ಬಿ, ಸೆಕ್ಷನ್‌ ಆಫೀಸರ್‌-35 ವರ್ಷ, ವಿಸಿಟಿಂಗ್‌ ಸೈಂಟಿಸ್ಟ್‌-65 ವರ್ಷ, ಪ್ರಾಜೆಕ್ಟ್ ಅಸಿಸ್ಟೆಂಟ್‌, ಸೈಂಟಿಫಿಕ್‌ ಅಸಿಸ್ಟೆಂಟ್‌, ಪ್ರಾಜೆಕ್ಟ್ ಮ್ಯಾನೇಜರ್‌, ಸಪೋರ್ಟಿಂಗ್‌ ಸೈಂಟಿಸ್ಟ್‌ ಹುದ್ದೆಗಳಿಗೆ ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ
ಸಂಬಂಧಪಟ್ಟ ವಿಷಯಗಳಲ್ಲಿ ಬಿಇ/ಬಿಟೆಕ್‌, ಎಂಇ/ಎಂಟೆಕ್‌, ಎಂಎಸ್ಸಿ, ಸ್ನಾತಕೋತ್ತರ ಪದವಿ ಇತ್ಯಾದಿ ವಿದ್ಯಾರ್ಹತೆ ಬಯಸಲಾಗಿದೆ. ಕೆಲವು ಹುದ್ದೆಗಳಿಗೆ ಆಯಾ ವಿಭಾಗಗಳಲ್ಲಿ ಸಂಶೋಧನಾ ಅನುಭವ ಬಯಸಲಾಗಿದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 23-10-2017 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-11-2017

ಹೆಚ್ಚಿನ ಮಾಹಿತಿಗೆ ವೆಬ್‌ ವಿಳಾಸ: www.tropmet.res.in ಗಮನಿಸಿ

ಸೋಮವಾರ, ಅಕ್ಟೋಬರ್ 23, 2017

ಕೆಪಿಎಸ್ಸಿ: 2015 ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆ ವೇಳಾಪಟ್ಟಿ ಪ್ರಕಟ

2015 ನೇ ಸಾಲಿನ ಗೆಝೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕ್ಕಾಗಿ ಕೆಪಿಎಸ್ಸಿ ನಡೆಸುವ ಮುಖ್ಯ ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡಿದೆ.

ಈ ಬಾರಿಯ ಮುಖ್ಯ ಪರೀಕ್ಷೆಗಳು ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದ್ದು, ಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ಕೇಂದ್ರಗಳಲ್ಲಿ ನಡೆಯಲಿದೆ.


ಡಿಸೆಂಬರ್ 16 ಕ್ಕೆ ಶುರುವಾಗಿ ಡಿಸೆಂಬರ್ 23 ರವರೆಗೂ ಪರೀಕ್ಷೆಗಳು ನಡೆಯಲಿವೆ. ಅಭ್ಯರ್ಥಿಗಳು ದಿನಕ್ಕೆ ಎರಡರಂತೆ ಒಟ್ಟು 5 ದಿನ ಪರೀಕ್ಷೆಗಳನ್ನು ಬರೆಯಬೇಕು (ಪ್ರಬಂಧ ಪತ್ರಿಕೆ ಮಾತ್ರ ಒಂದು ದಿನ ನಡೆಯಲಿದೆ)

ವೇಳಾಪಟ್ಟಿ

ದಿನಾಂಕ ವೇಳೆ ಪತ್ರಿಕೆ ವಿಷಯ 16-12-2017 ಬೆ.10-00 ರಿಂದ ಮ. 12-00 ಕಡ್ಡಾಯ ಪತ್ರಿಕೆ  ಕಡ್ಡಾಯ ಕನ್ನಡ ಮ.2-00 ರಿಂದ ಸ.4-00 ಕಡ್ಡಾಯ ಪತ್ರಿಕೆ ಕಡ್ಡಾಯ ಆಂಗ್ಲಭಾಷೆ  17-12-2017  ಬೆ.10-00 ರಿಂದ ಮ.1-00   ಪತ್ರಿಕೆ-1 ಪ್ರಬಂಧ   19-12-2017 ಬೆ.10-00 ರಿಂದ ಮ.1-00   ಪತ್ರಿಕೆ-2 ಸಾಮಾನ್ಯ ಅಧ್ಯಯನ    ಮ.2-00 ರಿಂದ ಸ.5-00  ಪತ್ರಿಕೆ-3  ಸಾಮಾನ್ಯ ಅಧ್ಯಯನ  21-12-2017 ಬೆ.10-00 ರಿಂದ ಮ.1-00   ಪತ್ರಿಕೆ-4  ಸಾಮಾನ್ಯ ಅಧ್ಯಯನ    ಮ.2-00 ರಿಂದ ಸ.5-00   ಪತ್ರಿಕೆ-5  ಸಾಮಾನ್ಯ ಅಧ್ಯಯನ  23-12-2017 ಬೆ.10-00 ರಿಂದ ಮ.1-00   ಪತ್ರಿಕೆ-6  ಐಚ್ಛಿಕ ವಿಷಯ ಪತ್ರಿಕೆ-1   ಮ.2-00 ರಿಂದ ಸ.5-00   ಪತ್ರಿಕೆ-7  ಐಚ್ಛಿಕ ವಿಷಯ ಪತ್ರಿಕೆ-2 

ಅರ್ಜಿ ಸಲ್ಲಿಸಲು ಹೆಚ್ಚುವರಿ ಅವಕಾಶ ನೀಡಲಾಗಿದ್ದು, ಅಕ್ಟೊಬರ್ 27 ಕಡೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ http://www.kpsc.kar.nic.in/

ಶನಿವಾರ, ಅಕ್ಟೋಬರ್ 21, 2017

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ ನೇಮಕಾತಿ

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಘಟಕದಲ್ಲಿ ಶೀಘ್ರಲಿಪಿಗಾರ, ಬೆಳಚ್ಚುಗಾರ, ಬೆರಳಚ್ಚು ನಕಲುಗಾರ ಮತ್ತು ಜವಾನರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ಚಾನಿಸಲಾಗಿದೆ.

ಒಟ್ಟು 218 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದು, ಆಸಕ್ತ ಅಭ್ಯರ್ಥಿಗಳು ನವೆಂಬರ್ 15 ರೊಳಗೆ ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ.


ಹುದ್ದೆಗಳ ವಿವರ
ಶೀಘ್ರಲಿಪಿಗಾರ ಹುದ್ದೆಗಳ ಸಂಖ್ಯೆಃ 60
ವೇತನ ಶ್ರೇಣಿ: ರೂ.14550-26700/-

ವಿದ್ಯಾರ್ಹತೆ
ಅರ್ಜಿ ಸಲ್ಲಿಸಲು ನಿಗದಿ ಪಡಿಸಿರುವ ಕಡೆಯ ದಿನಾಂಕದ ಒಳಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು


ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ (ಸೀನಿಯರ್ ಗ್ರೇಡ್) ಹಾಗೂ ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿ ಪ್ರೌಢ ದರ್ಜೆ ಪರೀಕ್ಷೆಯಲ್ಲಿ ತೇರ್ಗಡೆ ಅಥವಾ ಸತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿಗಳನ್ನು ಸ್ವೀಕರಿಸಲು ನಿಗದಿ ಪಡಿಸಿದರುವ ಕೊನೆಯ ದಿನಾಂಕದೊಳಗೆ ಹೊಂದಿರಬೇಕು.

ಟೈಪಿಸ್ಟ್ : 66

ವೇತನ ಶ್ರೇಣಿ: ರೂ.11600-21000/-
ವಿದ್ಯಾರ್ಹತೆ
ಅರ್ಜಿ ಸಲ್ಲಿಸಲು ನಿಗದಿ ಪಡಿಸಿರುವ ಕಡೆಯ ದಿನಾಂಕದ ಒಳಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು. ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ (ಸೀನಿಯರ್ ಗ್ರೇಡ್) ಅಥವಾ ಸತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿಗಳನ್ನು ಸ್ವೀಕರಿಸಲು ನಿಗದಿ ಪಡಿಸಿದರುವ ಕೊನೆಯ ದಿನಾಂಕದೊಳಗೆ ಹೊಂದಿರಬೇಕು.

ಜವಾನ-62 ಹುದ್ದೆಗಳು
ವೇತನ ಶ್ರೇಣಿ: ರೂ.9600-14550/- 

ವಿದ್ಯಾರ್ಹತೆ:7ನೇ ತರಗತಿ ತೇರ್ಗಡೆ ಹೊಂದಿರಬೇಕು ಕನ್ನಡದಲ್ಲಿ ಓದಲು ಹಾಗೂ ಬರೆಯಲು ತಿಳಿದಿರಬೇಕು

ಆಯ್ಕೆ ವಿಧಾನ

* ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ: ರೂ.200/-
* ಪ.ಜಾ/ಪ.ಪಂ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ ರೂ.50/-

ಆಯ್ಕೆ ವಿಧಾನ
ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು 45 ನಿಮಿಷಗಳಲ್ಲಿ ತರ್ಜುಮೆ ಮಾಡಿ ಬೆರಳಚ್ಚು ಮಾಡುವ ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.

ಮೆರಿಟ್ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.


ವಯೋಮಿತಿ

* ಸಾಮಾನ್ಯ ವರ್ಗ: 35 ವರ್ಷ
* ಪ್ರವರ್ಗ 2ಎ, 2ಬಿ, 3ಎ, 3ಬಿ: 38 ವರ್ಷ
* ಪ.ಜಾ, ಪ.ಪಂ, ಪ್ರ-1 : 40 ವರ್ಷ.

ಪ್ರಮುಖ ದಿನಾಂಕಗಳು

* ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15/11/2017, ರಾತ್ರಿ 11.59 ರವರೆಗೂ
* ಶುಲ್ಕ ಪಾವತಿ ಕೊನೆ ದಿನಾಂಕ : 16/11/2017

ಹೆಚ್ಚಿನ ಮಾಹಿತಿಗಾಗಿ ecourts.gov.in ಗಮನಿಸಿ

ಕರ್ನಾಟಕ ಹೈಕೋರ್ಟಿನಲ್ಲಿ ಭಾಷಾಂತರಗಾರ ಹುದ್ದೆಗಳ ನೇಮಕಾತಿ

ಕರ್ನಾಟಕ ಹೈಕೋರ್ಟಿನಲ್ಲಿ ಭಾಷಾಂತರಗಾರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 10 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹುದ್ದೆಯ ವಿವರ

ಭಾಷಾಂತರಗಾರರು ಒಟ್ಟು ಹುದ್ದೆ : 10 
ಭಾಸ್ಥಳ : ಬೆಂಗಳೂರು


ವೇತನ ಶ್ರೇಣಿ: ರೂ.21600-40050/-

ವಿದ್ಯಾರ್ಹತೆ

ಇಂಗ್ಲೀಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ (ಕನಿಷ್ಟ ಎರಡನೇ ದರ್ಜೆಯಲ್ಲಿ ಪಾಸಾಗಿರಬೇಕು). ಪದವಿಯಲ್ಲಿ ಕನ್ನಡವನ್ನು ಒಂದು ಭಾಷಾ ವಿಷಯವಾಗಿ ವ್ಯಾಸಂಗ ಮಾಡಿರಬೇಕು.

ವಯೋಮಿತಿ
* ಎಸ್.ಸಿ/ಎಸ್.ಟಿ/ಪ್ರ-1 ಅಭ್ಯರ್ಥಿಗಳಿಗೆ ವಯೋಮಿತಿ 18 ರಿಂದ 40 ವರ್ಷ
* ಒಬಿಸಿ ಅಭ್ಯರ್ಥಿಗಳಿಗೆ 18 ರಿಂದ 38 ವರ್ಷ

* ಇತರೆ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ (15/11/2017 ರಂತೆ ಅನ್ವಯ)

ನೇಮಕಾತಿ ಪ್ರಕ್ರಿಯೆ
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆ ನಡೆಸಲಾಗುತ್ತದೆ.

ಲಿಖಿತ ಪರೀಕ್ಷೆ ವಿವರ
200 ಅಂಕಗಳ ಲಿಖಿತ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ಮೊದಲ ಪತ್ರಿಕೆಯು 100 ಅಂಕಗಳ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಜ್ಞಾನ ಹಾಗು ಎರಡನೇ ಪತ್ರಿಕೆಯು 100 ಅಂಕಗಳ ಭಾಷಾಂತರವನ್ನು ಒಳಗೊಂಡಿರುತ್ತದೆ. 

ಮೌಖಿಕ ಪರೀಕ್ಷೆಯನ್ನು 50 ಅಂಕಗಳಿಗೆ ನಡೆಸಲಾಗುವುದು..

.ಅರ್ಜಿ ಶುಲ್ಕ
* ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500/-
* ಎಸ್.ಸಿ/ಎಸ್.ಟಿ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ ರೂ.250/-

ಪ್ರಮುಖ ದಿನಾಂಕಗಳು
* ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-11-2017
* ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 19-11-2017

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ http://karnatakajudiciary.kar.nic.in/Index.asp

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಪರೀಕ್ಷೆ ವೇಳಾಪಟ್ಟಿ ಬದಲು

ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹತ್ತು ಸಾವಿರ ಶಿಕ್ಷಕರ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಬದಲಾವಣೆಯಾಗಿದೆ.
ಶಿಕ್ಷಕರ ಹುದ್ದೆಗೆ ಒಟ್ಟು 4 ಪ್ರಶ್ನೆ ಪತ್ರಿಕೆಗಳಿಗೆ ಇದೇ ನವೆಂಬರ್ 4ರಿಂದ ನಡೆಯಬೇಕಿದ್ದ ಪರೀಕ್ಷೆಗಳು ನವೆಂಬರ್ 11ರಿಂದ ಪ್ರಾರಂಭವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


ಈಗಾಗಲೇ ನಿಗದಿ ಪಡಿಸಿರುವ ಆಯಾ ಜಿಲ್ಲೆಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ವೇಳಾಪಟ್ಟಿ ದಿನಾಂಕ ಈ ಕೆಳಗಿನಂತಿದೆ.

ಪರಿಷ್ಕೃತ ವೇಳಾಪಟ್ಟಿ

* ನವೆಂಬರ್ 11 ಮತ್ತು 12ರಂದು ಮೊದಲ ಪತ್ರಿಕೆ.
* ನವೆಂಬರ್ 18 ಮತ್ತು 19ರಂದು 2ನೇ ಪತ್ರಿಕೆ.
* ನವೆಂಬರ್ 25 ಮತ್ತು 26ರಂದು 3ನೇ ಪತ್ರಿಕೆ.
* ಡಿಸೆಂಬರ್ 9 ಮತ್ತು 10ರಂದು 4ನೇ ಪತ್ರಿಕೆಯ ಪರೀಕ್ಷೆ ನಡೆಯಲಿದೆ.




ಪರೀಕ್ಷೆ ವೇಳಾಪಟ್ಟಿ ಬದಲು

ರಾಜ್ಯದ 25 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲಾಗುವುದು.(ಕರ್ನಾಟಕದ 34 ಶೈಕ್ಷಣಿಕ ಜಿಲ್ಲೆಗಳಿಂದಲೂ ಸಹ ಅಭ್ಯರ್ಥಿಗಳು ಭಾಗವಹಿಸಬಹುದು).

ಎಲ್ಲ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಮೆರಿಟ್ ನಿರ್ಧರಿಸಲು ಪರಿಗಣಿಸಲಾಗುವುದು. ಅಂದರೆ, ಭಾಷೆ-ಆಂಗ್ಲ ವಿಷಯದ ಹುದ್ದೆಗೆ ಪೇಪರ್-1 ಮತ್ತು ಪೇಪರ್-2 ರಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುವುದು.

ಗಣಿತ ಮತ್ತು ವಿಜ್ಞಾನ ಹಾಗು ಸಮಾಜಪಾಠಗಳು ವಿಷಯಗಳ ಹುದ್ದೆಗಳಿಗೆ ಪೇಪರ್-1, ಪೇಪರ್-2 ಮತ್ತು ಪೇಪರ್-3 ರಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುವುದು.

ವೇಳಾ ಪಟ್ಟಿ ಬದಲಾವಣೆಯಾದ ಬಗ್ಗೆ ಇಲಾಖೆಯ ವೆಬ್ ಸೈಟ್ ನಲ್ಲಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ http://www.schooleducation.kar.nic.in/pdffiles/PryTrsRectRTT191017.pdf

ಐಒಸಿಎಲ್ :ಜೂನಿಯರ್‌ ಎಂಜಿನಿಯರಿಂಗ್ ಅಸಿಸ್ಟೆಂಟ್ ಗಳ ನೇಮಕಾತಿ

ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿಮಿಟೆಡ್‌ (ಐಒಸಿಎಲ್ ) ನಲ್ಲಿ ವಿವಿಧ ವಿಭಾಗಗಳಲ್ಲಿ ಜೂನಿಯರ್‌ ಎಂಜಿನಿಯರಿಂಗ್‌ ಅಸಿಸ್ಟೆಂಟ್‌ಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 45 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್‌ 31 ಕೊನೆಯ ದಿನವಾಗಿದೆ.


ಹುದ್ದೆಗಳ ವಿವರ
ಪ್ರೊಡಕ್ಷನ್‌ 15, ಎಲೆಕ್ಟ್ರಿಕಲ್‌-7, ಮೆಕ್ಯಾನಿಕಲ್‌-13, ಇನ್‌ಸ್ಟ್ರುಮೆಂಟೇಶನ್‌-9 ಮತ್ತು ಫೈರ್‌ ಆ್ಯಂಡ್‌ ಸೇಫ್ಟಿ ವಿಭಾಗದಲ್ಲಿ ಒಂದು ಹುದ್ದೆ ಖಾಲಿ ಇದೆ.
ಒಟ್ಟು ಹುದ್ದೆಗಳ ಪೈಕಿ ಸಾಮಾನ್ಯ ವರ್ಗದವರಿಗೆ 22, ಎಸ್‌ಸಿ ಅಭ್ಯರ್ಥಿಗಳಿಗೆ 9, ಎಸ್‌ಟಿ ವರ್ಗದವರಿಗೆ 1 ಮತ್ತು ಒಬಿಸಿ ಅಭ್ಯರ್ಥಿಗಳಿಗೆ 13 ಹುದ್ದೆಗಳನ್ನು ಮೀಸಲಿಡಲಾಗಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ನವೆಂಬರ್‌ನಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.


ವಿದ್ಯಾರ್ಹತೆ
ಕೆಮಿಕಲ್‌, ರಿಫೈನರಿ, ಎಲೆಕ್ಟ್ರಿಕಲ್‌, ಮೆಕ್ಯಾನಿಕಲ್‌, ಇನ್‌ಸ್ಟ್ರುಮೆಂಟೇಶನ್‌, ಇನ್‌ಸ್ಟ್ರುಮೆಂಟೇಶನ್‌ ಆ್ಯಂಡ್‌ ಕಂಟ್ರೋಲ್‌ ಅಥವಾ ಇನ್‌ಸ್ಟ್ರುಮೆಂಟೇಶನ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ವಿಷಯಗಳಲ್ಲಿ ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ 26 ವರ್ಷ ಮೀರಿರಬಾರದು. ಮೀಸಲಾತಿ ನಿಯಮಾನುಸಾರ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 150 ರೂ. ಶುಲ್ಕ ಪಾವತಿಸಬೇಕು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಇತರೆ ಎಲ್ಲಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ನೀಡಲಾಗಿದೆ.


ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಕೆಗೆ ಕೊನೆ ದಿನ: ಅಕ್ಟೋಬರ್‌ 31, 2017
* ಲಿಖಿತ ಪರೀಕ್ಷೆ: ನವೆಂಬರ್‌ 2017
* ಪರೀಕ್ಷಾ ಫಲಿತಾಂಶ: ಡಿಸೆಂಬರ್‌ 15, 2017

* ಅಂತಿಮ ಆಯ್ಕೆ ಪಟ್ಟಿ: ಜನವರಿ 15, 2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ https://www.iocl.com/home.aspx

ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಪ್ರವೇಶಾತಿ: 42 ಸೀಟುಗಳು ಖಾಲಿ

ಕರ್ನಾಟಕ ಸರ್ಕಾರ ನಡೆಸುತ್ತಿರುವ ಏಕೈಕ ಸಿನಿಮಾ ಸಂಸ್ಥೆಯಾದ, ಹೆಸರಘಟ್ಟದಲ್ಲಿರುವ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಈ ಬಾರಿ 42 ಸೀಟುಗಳು ಖಾಲಿ ಉಳಿದಿವೆ.

ಈ ಬಾರಿ ಇಲ್ಲಿನ ಕೋರ್ಸ್‌ಗಳ ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿರುವುದರಿಂದ 42 ಸೀಟುಗಳು ಖಾಲಿ ಉಳಿದಿವೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು. ತಳವಾರ ಹೇಳಿದ್ದಾರೆ.


ಈ ಸಂಸ್ಥೆಯು ತಾಂತ್ರಿಕ ಶಿಕ್ಷಣ ಇಲಾಖೆ ಅಧೀನದಲ್ಲಿ ಬರುತ್ತದೆ. ಒಟ್ಟು ಇಲ್ಲಿ 66 ಸೀಟುಗಳಿದ್ದು, ಈ ಪೈಕಿ 24 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಆದರೆ, ಆ.15ಕ್ಕೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಹೊರರಾಜ್ಯದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಿರುವುದರಿಂದ ಹೆಚ್ಚಿನ ಸೀಟುಗಳು ಖಾಲಿ ಉಳಿದಿವೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿದ ಬಳಿಕ ಉಳಿಯುವ ಸೀಟುಗಳನ್ನು ಮಾತ್ರ ಹೊರರಾಜ್ಯದ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ತಾಂತ್ರಿಕ ಶಿಕ್ಷಣ ಇಲಾಖೆಗೆ ಉನ್ನತ ಶಿಕ್ಷಣ ಇಲಾಖೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಇದು ಕರ್ನಾಟಕ ಸರ್ಕಾರ ನಡೆಸುತ್ತಿರುವ ಏಕೈಕ ಸಿನಿಮಾ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ತಾಂತ್ರಿಕ ಶಿಕ್ಷಣ ಇಲಾಖೆ ಅಧೀನದಲ್ಲಿ ಬರುತ್ತದೆ. ಇಲ್ಲಿ ಮೂರು ವರ್ಷಗಳ ಡಿಪ್ಲೋಮಾ ಸಿನೆಮಾಟೋಗ್ರಫಿ ಮತ್ತು ಸೌಂಡ್ ರೆಕಾರ್ಡಿಂಗ್ ಅಂಡ್ ಇಂಜಿನಿಯರಿಂಗ್ ಕೋರ್ಸ್‌ಗಳನ್ನು ಹೇಳಿಕೊಡಲಾಗುತ್ತದೆ. ಆರಂಭದಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುತಿತ್ತು, 2011 ರಿಂದ ಹೊರ ರಾಜ್ಯದವರಿಗೂ ಪ್ರವೇಶ ಕಲ್ಪಿಸಲಾಗಿದೆ.

ಶುಕ್ರವಾರ, ಅಕ್ಟೋಬರ್ 20, 2017

ಕೆ ಆರ್ ಐ ಡಿ ಎಲ್ ವಿವಿಧ ಹುದ್ದೆಗಳ ನೇಮಕಾತಿಗೆ ಆನ್-ಲೈನ್ ಅರ್ಜಿ ಆಹ್ವಾನ

ಕರ್ನಾಟಕ ರೂರಲ್ ಇನ್ ಪ್ರಾಸ್ಟ್ರಕ್ಚರ್ ಡೆವೆಲಪ್ಮೆಂಟ್ ಲಿಮಿಟಿಡ್ (ಕೆಆರ್ ಐಡಿಎಲ್) ನಲ್ಲಿ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದು, ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು 91 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಐಟಿಐ, ಪಿಯುಸಿ, ಬಿಎಸ್ಸಿ, ಬಿ.ಕಾಂ, ಬಿ.ಟೆಕ್, ಬಿ.ಇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆಗಳ ವಿವರ
ಸಹಾಯಕ ಅಭಿಯಂತರರು ಗ್ರೇಡ್-1 (ಸಿವಿಲ್) : 17 ಹುದ್ದೆಗಳು

ವೇತನ ಶ್ರೇಣಿ: 22800-43200/-

ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ಬಿ.ಇ (ಸಿವಿಲ್) ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು

ಸಹಾಯಕ ಅಭಿಯಂತರರು ಗ್ರೇಡ್-1 (ಎಲೆಕ್ಟ್ರಿಕಲ್): 1ಹುದ್ದೆ


ವೇತನ ಶ್ರೇಣಿ: 22800-43200/-

ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ಬಿ.ಇ (ಎಲೆಕ್ಟ್ರಿಕಲ್) ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು


ಕಿರಿಯ ಅಭಿಯಂತರರು (ಸಿವಿಲ್) : 11 ಹುದ್ದೆಗಳು
ವೇತನ ಶ್ರೇಣಿ: 17650-32000/-
ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ತಾಂತ್ರಿಕ ಮಂಡಳಿಯಿಂದ ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ಅಧೀಕ್ಷಕರು (ಲೆಕ್ಕಪತ್ರ)-08 ಹುದ್ದೆಗಳು
ವೇತನ ಶ್ರೇಣಿ: ರೂ.20000-36300/-
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ಎಂ.ಎಸ್ ಆಫೀಸ್ ಹಾಗೂ ಟ್ಯಾಲಿ ಪರಿಜ್ಞಾನ ಹೊಂದಿರಬೇಕು

ಪ್ರಥಮ ದರ್ಜೆ ಸಹಾಯಕರು-07 ಹುದ್ದೆಗಳು 
ವೇತನ ಶ್ರೇಣಿ: ರೂ.14550-26700/- 
ವಿದ್ಯಾರ್ಹತೆ : ಅಂಗೀಕೃತ ವಿಶ್ವವಿಶ್ವವಿದ್ಯಾಲಯದಿಂದ ಯಾವುದಾದರು ಪದವಿಯಲ್ಲಿ ತೇರ್ಗಡೆಯಾಗಿರಬೇಕು. ಎಂ.ಎಸ್ ಆಫೀಸ್, ಎಂ.ಎಸ್ ಎಕ್ಸಿಲ್ ಹಾಗೂ ಟ್ಯಾಲಿ ಪರಿಜ್ಞಾನ ಹೊಂದಿರಬೇಕು.
ದ್ವಿತೀಯ ದರ್ಜೆ ಸಹಾಯಕರು-17 ಹುದ್ದೆಗಳು 
ವೇತನ ಶ್ರೇಣಿ: ರೂ.11600-21000/- 
ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ತಾಂತ್ರಿಕ ಮಂಡಳಿಯಿಂದ ಪಿಯುಸಿ ಅಥವಾ ೧೦+೨ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಎಂ.ಎಸ್ ಆಫೀಸ್, ಎಂ.ಎಸ್ ಎಕ್ಸಿಲ್ ಹಾಗೂ ಟ್ಯಾಲಿ ಪರಿಜ್ಞಾನ ಹೊಂದಿರಬೇಕು.

ಸಹಾಯಕ ಕಾರ್ಯ ನಿರೀಕ್ಷಕರು-29 ಹುದ್ದೆಗಳು 
ವೇತನ ಶ್ರೇಣಿ: ರೂ.10400-16400/- 
ವಿದ್ಯಾರ್ಹತೆ : ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ತಾಂತ್ರಿಕ ಮಂಡಳಿಯಿಂದ ಐಟಿಐ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ವಯೋಮಿತಿ 
ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 35 ವರ್ಷಗಳು. (ಒಬಿಸಿ ವರ್ಗದವರಿಗೆ ಮೂರು ವರ್ಷ ಮತ್ತು ಎಸ್.ಸಿ/ಎಸ್.ಟಿ/ಪ್ರ-1 ರ ಅಭ್ಯರ್ಥಿಗಳಿಗೆ ಐದು ವರ್ಷಗಳ ಸಡಿಲಿಕೆ ಇದೆ)

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದೆ.

ಅರ್ಜಿ ಶುಲ್ಕ
* ಸಾಮಾನ್ಯ ಅಭ್ಯರ್ಥಿಗಳಿಗೆ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.500/-
* ಎಸ್.ಸಿ/ಎಸ್.ಟಿ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ ರೂ.250/-

ಪ್ರಮುಖ ದಿನಾಂಕಗಳು

* ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಪ್ರಾರಂಭ ದಿನಾಂಕ: 25-10-2017
* ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸಲು ಕೊನೆಯ ದಿನಾಂಕ: 24-11-2017
* ಅಂಚೆ ಕಛೇರಿ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 27-11-2017

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ http://kridl.org/index.html























ಬುಧವಾರ, ಅಕ್ಟೋಬರ್ 18, 2017

ಸಿಬಿಎಸ್ಇ ಎನ್ ಇ ಟಿ 2017: ಪ್ರವೇಶ ಪತ್ರ ಪ್ರಕಟ

ಉಪನ್ಯಾಸಕರ ಅರ್ಹತಾ ಪರೀಕ್ಷೆ ಯುಜಿಸಿ ನೆಟ್-2017 ನೇ ಸಾಲಿನ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ಪ್ರಕಟಿಸಿದೆ. ಪರೀಕ್ಷಾ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳ ಪ್ರವೇಶ ಪತ್ರಗಳನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ನಮೂದಿಸಿ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಸಿಬಿಎಸ್ಇ ಪ್ರತಿವರ್ಷದಂತೆ ಈ ವರ್ಷವು ನಡೆಸುವ ಜವಾಬ್ದಾರಿ ಹೊತ್ತಿದ್ದು, ಈ ಬಾರಿಯ ಎನ್ಇಟಿ ಪರೀಕ್ಷೆಯು ದೇಶದ 91 ನಗರಗಳಲ್ಲಿ ನವೆಂಬರ್ 05 (ಭಾನುವಾರ) ರಂದು ನಡೆಯಲಿದೆ.

ಪ್ರವೇಶ ಪತ್ರ ಪಡೆಯುವ ವಿಧಾನ

* ಸಿಬಿಎಸ್ಇ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ http://cbsenet.nic.in/cms/public/home.aspx
* ಮುಖ ಪುಟದಲ್ಲಿ ಕಾಣುವ "Login for Admit Card and Image Correction - NET November 2017" ಲಿಂಕ್ ಮೇಲೆ ಕ್ಲಿಕ್ ಮಾಡಿ
* ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ನಮೂದಿಸಿ ಪ್ರವೇಶ ಪತ್ರ ಪಡೆಯಿರಿ
ಒಂದು ವೇಳೆ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಲು ತೊಂದರೆಯಾದರೆ ಸಹಾಯವಾಣಿಯ ಮೂಲಕ ಸಂಪರ್ಕಿಸಲು ಕೋರಿದೆ.
ಸಹಾಯವಾಣಿ ಸಂಖ್ಯೆ: 7042399520, 7042399521, 7042399525, 7042399526 ಅಥವಾ net@cbse.gov.in ಗೆ ಮೇಲ್ ಮಾಡಲು ಸೂಚಿಸಲಾಗಿದೆ.


ಪ್ರವೇಶ ಪತ್ರಗಳನ್ನು ಯಾವುದೇ ಕಾರಣಕ್ಕೂ ಅಭ್ಯರ್ಥಿಗಳಿಗೆ ಅಂಚೆ ಮೂಲಕ ಕಳುಹಿಸುವುದಿಲ್ಲ.

ಆಧಾರ್ ಕಾರ್ಡ್ ಕಡ್ಡಾಯ ಈ ಬಾರಿಯ ಎನ್ ಇ ಟಿ ಪರೀಕ್ಷಾರ್ಥಿಗಳು ಆಧಾರ್ ಕಾರ್ಡ್ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಪರೀಕ್ಷೆಗೆ ಮಾತ್ರವಲ್ಲದೇ ಆನ್-ಲೈನ್ ಅರ್ಜಿ ತುಂಬಲು ಕೂಡ ಆಧಾರ್ ಸಂಖ್ಯೆ ನಮೂದಿಸುವಂತೆ ಸೂಚಿಸಿದೆ.

ಎನ್ಇಟಿ ಪರೀಕ್ಷಾ ವಿಧಾನ

ಎನ್ಇಟಿ ಪರೀಕ್ಷೆಯು ಒಟ್ಟು ಮೂರು ಪತ್ರಿಕೆಗಳನ್ನು ಒಳಗೊಂಡಿದ್ದು 350 ಅಂಕಗಳಿಗೆ ನಡೆಸಲಾಗುವುದು.

ಮೊದಲ ಪತ್ರಿಕೆ 60 ಪ್ರಶ್ನೆಗಳನ್ನೊಳಗೊಂಡಿದ್ದು 50 ಪ್ರಶ್ನೆಗಳಿಗೆ ಅಭ್ಯರ್ಥಿಯು ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ಈ ಪತ್ರಿಕೆಯು ಸಾಮಾನ್ಯ ಪತ್ರಿಕೆಯಾಗಿದ್ದು ಲಾಜಿಕ್, ರೀಸನಿಂಗ್, ಮೆಂಟಲ್ ಎಬಿಲಿಟಿ ಸೇರಿದಂತೆ ಹತ್ತು ವಿವಿಧ ವಿಷಯಗಳ ಬಗ್ಗೆ ಕೇಳಲಾಗುವುದು.

ಎರಡನೇ ಪತ್ರಿಕೆಯು 50 ಪ್ರಶ್ನೆಗಳನ್ನು ಒಳಗೊಂಡಿದ್ದು ಇದು ವಿಷಯಾಧರಿತ ಪತ್ರಿಕೆಯಾಗಿರುತ್ತದೆ.ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ.

ಮೂರನೇ ಪತ್ರಿಕೆಯು 75 ಪ್ರಶ್ನೆಗಳನ್ನು ಒಳಗೊಂಡಿದ್ದು ಇದು ವಿಷಯಾಧರಿತ ಪತ್ರಿಕೆಯಾಗಿರುತ್ತದೆ.ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ.

ಸೋಮವಾರ, ಅಕ್ಟೋಬರ್ 16, 2017

ಬಿ.ಇ/ಡಿಪ್ಲೊಮಾ/ಐಟಿಐ ಆದವರಿಗೆ ಅಪ್ರೆಂಟಿಸ್ ತರಬೇತಿ

ವರಾಹಿ ಜಲವಿದ್ಯುತ್ ಯೋಜನಾ ಪ್ರದೇಶದ ವಿದ್ಯುದಾಗಾರ/ಕಚೇರಿಗಳಲ್ಲಿ ಶಿಶಿಕ್ಷುಗಳನ್ನು ತರಬೇತಿಗೆ ನಿಯೋಜಿಸಲು ಉದ್ದೇಶಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬಿ.ಇ, ಡಿಪ್ಲೊಮಾ, ಐಟಿಟಿ ಸೇರಿದಂತೆ ಒಟ್ಟು 32 ಹುದ್ದೆಗಳನ್ನು ಒಂದು ವರ್ಷದ ಅಪ್ರೆಂಟಿಸ್ ತರಬೇತಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 16 ರೊಳಗೆ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

ಆಯ್ಕೆಯಾದ ಶಿಶಿಕ್ಷುಗಳಿಗೆ ಮಾಸಿಕ ಸ್ಟೈಪೆಂಡ್ ಕೂಡ ನೀಡಲಾಗುವುದು.

ಸ್ಟೈಪಂಡ್ ವಿವರ:
* ಪದವೀಧರ ಶಿಶಿಕ್ಷುಗಳಿಗೆ ರೂ.7000/-
* ಡಿಪ್ಲೊಮಾ ಶಿಶಿಕ್ಷುಗಳಿಗೆ ರೂ.5000/-
* ಐಟಿಐ ಶಿಶಿಕ್ಷುಗಳಿಗೆ ರೂ. 10.000/- ಮತ್ತು ಎಸ್ ಎಸ್ ಎಲ್ ಸಿ ಶಿಶಿಕ್ಷುಗಳಿಗೆ ಮನೆ ಅವಶ್ಯಕತೆಯಿದ್ದಲ್ಲಿ ಜಂಟಿಯಾಗಿ ವಿತರಿಸಿ ಬಾಡಿಗೆಯನ್ನು ಕಡಿತಗೊಳಿಸಲಾಗುವುದು.

ಶಿಶಿಕ್ಷು ಹುದ್ದೆಗಳ ವಿವರ
ಬಿ.ಇ/ಡಿಪ್ಲೊಮಾ ಶಿಶಿಕ್ಷು ಹುದ್ದೆಗಳು ಸೀಟುಗಳು ಬಿ.ಇ (ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್) 04 ಬಿ.ಇ (ಮೆಕ್ಯಾನಿಕಲ್) 02 ಬಿ.ಇ (ಕಂಪ್ಯೂಟರ್ ಸೈನ್ಸ್) 01 ಡಿಪ್ಲೊಮಾ (ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್) 02 ಡಿಪ್ಲೊಮಾ (ಮೆಕ್ಯಾನಿಕಲ್) 01 ಡಿಪ್ಲೊಮಾ (ಕಂಪ್ಯೂಟರ್ ಸೈನ್ಸ್) 01 ಡಿಪ್ಲೊಮಾ (ಕಮರ್ಷಿಯಲ್ ಪ್ರಾಕ್ಟಿಸ್) 01 ಒಟ್ಟು 13 ಐಟಿಐ ಶಿಶಿಕ್ಷು ಹುದ್ದೆಗಳು ಸೀಟುಗಳು ಪ್ರೋಗ್ರಾಮಿಂಗ್ ಅಂಡ್ ಸಿಸ್ಟಂ ಅಡ್ಮಿನಿಸ್ಟ್ರೇಷನ್ ಅಸಿಸ್ಟೆಂಟ್ 04 ಎಲೆಕ್ಟ್ರಿಷಿಯನ್ 04 ಎ ಸಿ ಎಲೆಕ್ಟ್ರಿಷಿಯನ್ 01 ಫಿಟ್ಟರ್ 03 ವೆಲ್ಡರ್ 03 ಡೀಸಲ್ ಮೆಕ್ಯಾನಿಕ್ 01 ಕಾರ್ಪೆಂಟರ್ 02 ಹೌಸ್ ಕೀಪರ್ (ಕಾರ್ಪೊರೇಟ್) 01 ಒಟ್ಟು 19

ಈಗಾಗಲೇ ಶಿಶಿಕ್ಷು ತರಬೇತಿ ಪಡೆದ ಅಭ್ಯರ್ಥಿಗಳು ಮತ್ತೊಮ್ಮೆ ತರಬೇತಿಗೆ ನಿಯೋಜಿಸಲು ಅವಕಾಶವಿರುವುದಿಲ್ಲ. ತರಬೇತಿ ನಂತರ ಶಿಶಿಕ್ಷುಗಳನ್ನು ಬಿಡುಗಡೆಗೊಳಿಸಲಾಗುವುದು.

ತರಬೇತಿಗೆ ಕನಿಷ್ಠ 18 ವರ್ಷಗಳು ಪೂರೈಸಿರಬೇಕು.

ಬಿ.ಇ/ಡಿಪ್ಲೊಮಾ ಅಭ್ಯರ್ಥಿಗಳು www.mhrdnats.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು. ಐಟಿಐ/ಎಸ್ ಎಸ್ ಎಲ್ ಸಿ ಅಭ್ಯರ್ಥಿಗಳು www.apprenticeship.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು.


ವೆಬ್ಸೈಟ್ ನಲ್ಲಿ ನೋಂದಾಯಿಸಿಕೊಂಡ ನಂತರ ಅದರ ಪ್ರಿಂಟ್ ತೆಗೆದು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿ ವಿಳಾಸಕ್ಕೆ ಕಳುಹಿಸತಕ್ಕದ್ದು.

ಅರ್ಜಿ ಸಲ್ಲಿಸಬೇಕಾದ ವಿಳಾಸ

ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಹೆಚ್.ಆರ್.ಡಿ)
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ,
ವರಾಹಿ ಜಲವಿದ್ಯುತ್ ಯೋಜನೆ ಹೊಸಂಗಡಿ
ಕುಂದಾಪುರ ತಾಲ್ಲೂಕು, ಉಡುಪಿ-56285

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-10-2017

ಇಂಡಿಯನ್ ನೇವಿಯಲ್ಲಿ ಅರ್ಜಿ ಆಹ್ವಾನ... ಈ ಕೂಡಲೇ ಅರ್ಜಿ ಸಲ್ಲಿಸಿ!

ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಕೆಡೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 21, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇಂಡಿಯ...