ಬುಧವಾರ, ಅಕ್ಟೋಬರ್ 18, 2017

ಸಿಬಿಎಸ್ಇ ಎನ್ ಇ ಟಿ 2017: ಪ್ರವೇಶ ಪತ್ರ ಪ್ರಕಟ

ಉಪನ್ಯಾಸಕರ ಅರ್ಹತಾ ಪರೀಕ್ಷೆ ಯುಜಿಸಿ ನೆಟ್-2017 ನೇ ಸಾಲಿನ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ಪ್ರಕಟಿಸಿದೆ. ಪರೀಕ್ಷಾ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳ ಪ್ರವೇಶ ಪತ್ರಗಳನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ನಮೂದಿಸಿ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಸಿಬಿಎಸ್ಇ ಪ್ರತಿವರ್ಷದಂತೆ ಈ ವರ್ಷವು ನಡೆಸುವ ಜವಾಬ್ದಾರಿ ಹೊತ್ತಿದ್ದು, ಈ ಬಾರಿಯ ಎನ್ಇಟಿ ಪರೀಕ್ಷೆಯು ದೇಶದ 91 ನಗರಗಳಲ್ಲಿ ನವೆಂಬರ್ 05 (ಭಾನುವಾರ) ರಂದು ನಡೆಯಲಿದೆ.

ಪ್ರವೇಶ ಪತ್ರ ಪಡೆಯುವ ವಿಧಾನ

* ಸಿಬಿಎಸ್ಇ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ http://cbsenet.nic.in/cms/public/home.aspx
* ಮುಖ ಪುಟದಲ್ಲಿ ಕಾಣುವ "Login for Admit Card and Image Correction - NET November 2017" ಲಿಂಕ್ ಮೇಲೆ ಕ್ಲಿಕ್ ಮಾಡಿ
* ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ನಮೂದಿಸಿ ಪ್ರವೇಶ ಪತ್ರ ಪಡೆಯಿರಿ
ಒಂದು ವೇಳೆ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಲು ತೊಂದರೆಯಾದರೆ ಸಹಾಯವಾಣಿಯ ಮೂಲಕ ಸಂಪರ್ಕಿಸಲು ಕೋರಿದೆ.
ಸಹಾಯವಾಣಿ ಸಂಖ್ಯೆ: 7042399520, 7042399521, 7042399525, 7042399526 ಅಥವಾ net@cbse.gov.in ಗೆ ಮೇಲ್ ಮಾಡಲು ಸೂಚಿಸಲಾಗಿದೆ.


ಪ್ರವೇಶ ಪತ್ರಗಳನ್ನು ಯಾವುದೇ ಕಾರಣಕ್ಕೂ ಅಭ್ಯರ್ಥಿಗಳಿಗೆ ಅಂಚೆ ಮೂಲಕ ಕಳುಹಿಸುವುದಿಲ್ಲ.

ಆಧಾರ್ ಕಾರ್ಡ್ ಕಡ್ಡಾಯ ಈ ಬಾರಿಯ ಎನ್ ಇ ಟಿ ಪರೀಕ್ಷಾರ್ಥಿಗಳು ಆಧಾರ್ ಕಾರ್ಡ್ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಪರೀಕ್ಷೆಗೆ ಮಾತ್ರವಲ್ಲದೇ ಆನ್-ಲೈನ್ ಅರ್ಜಿ ತುಂಬಲು ಕೂಡ ಆಧಾರ್ ಸಂಖ್ಯೆ ನಮೂದಿಸುವಂತೆ ಸೂಚಿಸಿದೆ.

ಎನ್ಇಟಿ ಪರೀಕ್ಷಾ ವಿಧಾನ

ಎನ್ಇಟಿ ಪರೀಕ್ಷೆಯು ಒಟ್ಟು ಮೂರು ಪತ್ರಿಕೆಗಳನ್ನು ಒಳಗೊಂಡಿದ್ದು 350 ಅಂಕಗಳಿಗೆ ನಡೆಸಲಾಗುವುದು.

ಮೊದಲ ಪತ್ರಿಕೆ 60 ಪ್ರಶ್ನೆಗಳನ್ನೊಳಗೊಂಡಿದ್ದು 50 ಪ್ರಶ್ನೆಗಳಿಗೆ ಅಭ್ಯರ್ಥಿಯು ಉತ್ತರಿಸಬೇಕಾಗುತ್ತದೆ. ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ಈ ಪತ್ರಿಕೆಯು ಸಾಮಾನ್ಯ ಪತ್ರಿಕೆಯಾಗಿದ್ದು ಲಾಜಿಕ್, ರೀಸನಿಂಗ್, ಮೆಂಟಲ್ ಎಬಿಲಿಟಿ ಸೇರಿದಂತೆ ಹತ್ತು ವಿವಿಧ ವಿಷಯಗಳ ಬಗ್ಗೆ ಕೇಳಲಾಗುವುದು.

ಎರಡನೇ ಪತ್ರಿಕೆಯು 50 ಪ್ರಶ್ನೆಗಳನ್ನು ಒಳಗೊಂಡಿದ್ದು ಇದು ವಿಷಯಾಧರಿತ ಪತ್ರಿಕೆಯಾಗಿರುತ್ತದೆ.ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ.

ಮೂರನೇ ಪತ್ರಿಕೆಯು 75 ಪ್ರಶ್ನೆಗಳನ್ನು ಒಳಗೊಂಡಿದ್ದು ಇದು ವಿಷಯಾಧರಿತ ಪತ್ರಿಕೆಯಾಗಿರುತ್ತದೆ.ಪ್ರತಿ ಪ್ರಶ್ನೆಗೆ ಎರಡು ಅಂಕಗಳನ್ನು ನಿಗದಿಪಡಿಸಲಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಇಂಡಿಯನ್ ನೇವಿಯಲ್ಲಿ ಅರ್ಜಿ ಆಹ್ವಾನ... ಈ ಕೂಡಲೇ ಅರ್ಜಿ ಸಲ್ಲಿಸಿ!

ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಕೆಡೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 21, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇಂಡಿಯ...