ಶನಿವಾರ, ಅಕ್ಟೋಬರ್ 21, 2017

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಪರೀಕ್ಷೆ ವೇಳಾಪಟ್ಟಿ ಬದಲು

ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹತ್ತು ಸಾವಿರ ಶಿಕ್ಷಕರ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಬದಲಾವಣೆಯಾಗಿದೆ.
ಶಿಕ್ಷಕರ ಹುದ್ದೆಗೆ ಒಟ್ಟು 4 ಪ್ರಶ್ನೆ ಪತ್ರಿಕೆಗಳಿಗೆ ಇದೇ ನವೆಂಬರ್ 4ರಿಂದ ನಡೆಯಬೇಕಿದ್ದ ಪರೀಕ್ಷೆಗಳು ನವೆಂಬರ್ 11ರಿಂದ ಪ್ರಾರಂಭವಾಗಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


ಈಗಾಗಲೇ ನಿಗದಿ ಪಡಿಸಿರುವ ಆಯಾ ಜಿಲ್ಲೆಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ವೇಳಾಪಟ್ಟಿ ದಿನಾಂಕ ಈ ಕೆಳಗಿನಂತಿದೆ.

ಪರಿಷ್ಕೃತ ವೇಳಾಪಟ್ಟಿ

* ನವೆಂಬರ್ 11 ಮತ್ತು 12ರಂದು ಮೊದಲ ಪತ್ರಿಕೆ.
* ನವೆಂಬರ್ 18 ಮತ್ತು 19ರಂದು 2ನೇ ಪತ್ರಿಕೆ.
* ನವೆಂಬರ್ 25 ಮತ್ತು 26ರಂದು 3ನೇ ಪತ್ರಿಕೆ.
* ಡಿಸೆಂಬರ್ 9 ಮತ್ತು 10ರಂದು 4ನೇ ಪತ್ರಿಕೆಯ ಪರೀಕ್ಷೆ ನಡೆಯಲಿದೆ.




ಪರೀಕ್ಷೆ ವೇಳಾಪಟ್ಟಿ ಬದಲು

ರಾಜ್ಯದ 25 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲಾಗುವುದು.(ಕರ್ನಾಟಕದ 34 ಶೈಕ್ಷಣಿಕ ಜಿಲ್ಲೆಗಳಿಂದಲೂ ಸಹ ಅಭ್ಯರ್ಥಿಗಳು ಭಾಗವಹಿಸಬಹುದು).

ಎಲ್ಲ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಮೆರಿಟ್ ನಿರ್ಧರಿಸಲು ಪರಿಗಣಿಸಲಾಗುವುದು. ಅಂದರೆ, ಭಾಷೆ-ಆಂಗ್ಲ ವಿಷಯದ ಹುದ್ದೆಗೆ ಪೇಪರ್-1 ಮತ್ತು ಪೇಪರ್-2 ರಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುವುದು.

ಗಣಿತ ಮತ್ತು ವಿಜ್ಞಾನ ಹಾಗು ಸಮಾಜಪಾಠಗಳು ವಿಷಯಗಳ ಹುದ್ದೆಗಳಿಗೆ ಪೇಪರ್-1, ಪೇಪರ್-2 ಮತ್ತು ಪೇಪರ್-3 ರಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಲಾಗುವುದು.

ವೇಳಾ ಪಟ್ಟಿ ಬದಲಾವಣೆಯಾದ ಬಗ್ಗೆ ಇಲಾಖೆಯ ವೆಬ್ ಸೈಟ್ ನಲ್ಲಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ http://www.schooleducation.kar.nic.in/pdffiles/PryTrsRectRTT191017.pdf

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಇಂಡಿಯನ್ ನೇವಿಯಲ್ಲಿ ಅರ್ಜಿ ಆಹ್ವಾನ... ಈ ಕೂಡಲೇ ಅರ್ಜಿ ಸಲ್ಲಿಸಿ!

ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಕೆಡೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 21, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇಂಡಿಯ...