ಭಾನುವಾರ, ಡಿಸೆಂಬರ್ 3, 2017

ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (ಪುರುಷ)-ಕೆ ಎಸ್ ಆರ್ ಪಿ 849 ಹುದ್ದೆಗಳ ನೇಮಕಾತಿ

ಕರ್ನಾಟಕ ರಾಜ್ಯದ, ಪೊಲೀಸ್ ಇಲಾಖೆಯಲ್ಲಿನ ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (ಪುರುಷ)-ಕೆ ಎಸ್ ಆರ್ ಪಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 849 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‍ಸೈಟ್ ನಲ್ಲಿ ಆನ್-ಲೈನ್ ಮುಖಾಂತರ ಮಾತ್ರ ಸಲ್ಲಿಸಲು ಅವಕಾಶವಿದೆ.


ಹುದ್ದೆಗಳ ವಿವರ

* ಪೊಲೀಸ್ ಕಾನ್ಸ್‌ಟೇಬಲ್ (ಕೆ ಎಸ್ ಆರ್ ಪಿ ) (ಪುರುಷ) - 834
* ಪೊಲೀಸ್ ಕಾನ್ಸ್‌ಟೇಬಲ್ (ಕೆ ಎಸ್ ಆರ್ ಪಿ ) (ಪುರುಷ) (ಹೈ-ಕ) - 15
ಒಟ್ಟು = 849

ವಿದ್ಯಾರ್ಹತೆ
ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ./ 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ, ಅಂದರೆ 08.12.2017ಕ್ಕೆ ಹೊಂದಿರಬೇಕು. (ಮಾಜಿ ಸೈನಿಕ ಅಭ್ಯರ್ಥಿಗಳು ವಿದ್ಯಾರ್ಹತೆಯ ಪ್ರಮಾಣ ಪತ್ರವನ್ನು ದಿನಾಂಕ: 08.12.2017 ರೊಳಗೆ ಹೊಂದಿದ್ದರೆ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ಮಾತ್ರ ಪರಿಗಣಿಸಲಾಗುವುದು).

ವೇತನ ಶ್ರೇಣಿ; ರೂ.11600-21000/-


ವಯೋಮಿತಿ
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 08.12.2017ಕ್ಕೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷಗಳು.
* ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು.
* ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷಗಳು
* ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇರಲಿದೆ.

ಅರ್ಜಿ ಶುಲ್ಕ
* ಸಾಮಾನ್ಯ ವರ್ಗ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ₹250/-
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ₹100/-

ಪ್ರಮುಖ ದಿನಾಂಕಗಳ ಮಾಹಿತಿ
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20.11.2017 ಬೆಳಿಗ್ಗೆ 10.00 ಗಂಟೆಗೆ
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08.12.2017 ಸಂಜೆ 06.00 ಗಂಟೆಗೆ
* ಶುಲ್ಕವನ್ನು ಅಧಿಕೃತ ಬ್ಯಾಂಕ್ ಕಛೇರಿ ವೇಳೆಯಲ್ಲಿ ಪಾವತಿಸಲು ಕೊನೆಯ ದಿನಾಂಕ: 12.12.2017.

ಸಹಾಯವಾಣಿ
ಅಭ್ಯರ್ಥಿಗಳು ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (ಪುರುಷ)-ಕೆ ಎಸ್ ಆರ್ ಪಿ-2017 ನೇಮಕಾತಿ ಸಹಾಯವಾಣಿ ಸಂಖ್ಯೆ. 080-22943346 ನ್ನು ಸಂಪರ್ಕಿಸಿ ನೇಮಕಾತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸ್ಪಷ್ಠಪಡಿಸಿಕೊಳ್ಳಬಹುದು. (ದಿನಾಂಕ:20.11.2017ರಿಂದ ಪ್ರತಿದಿನ ಬೆಳಿಗ್ಗೆ 10-00 ರಿಂದ ಸಾಯಂಕಾಲ 6-00 ಗಂಟೆಯವರೆಗು)

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: http://srpc17.ksp-online.in/index.aspx?ReturnUrl=%2f
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ: http://srpc17.ksp-online.in/Instructions.aspx

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಇಂಡಿಯನ್ ನೇವಿಯಲ್ಲಿ ಅರ್ಜಿ ಆಹ್ವಾನ... ಈ ಕೂಡಲೇ ಅರ್ಜಿ ಸಲ್ಲಿಸಿ!

ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಕೆಡೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 21, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇಂಡಿಯ...