ಬುಧವಾರ, ನವೆಂಬರ್ 29, 2017

ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ: ವಾಕ್ ಇನ್ ಇಂಟರ್ವ್ಯೂ

ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು 2017-18ನೇ ಸಾಲಿಗೆ ಬೋಧಕ-ಬೋಧಕೇತರ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮೈಕ್ರೋಬಯಾಲಜಿ, ಕಮ್ಯುನಿಟಿ ಮೆಡಿಸಿನ್‌, ಸೈಕ್ಯಾಟ್ರಿ, ಪೀಡಿಯಾಟ್ರಿಕ್ಸ್‌ ಸೇರಿದಂತೆ 17 ವಿವಿಧ ವಿಭಾಗಗಳಲ್ಲಿ 46 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅರ್ಜಿ ಸಲ್ಲಿಸಲು ಡಿಸೆಂಬರ್‌ 2 ಕೊನೆಯ ದಿನವಾಗಿದೆ.

ಒಟ್ಟು 46 ಹುದ್ದೆಗಳಿಗೆ ರೆಗ್ಯೂಲರ್‌ ಮತ್ತು ಕಾಂಟ್ರಾಕ್ಟ್ ಆಧಾರದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಅರ್ಹ ಅಭ್ಯರ್ಥಿಗಳನ್ನು ಡಿಸೆಂಬರ್‌ 6ರಂದು ನಡೆಯಲಿರುವ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.

ಹುದ್ದೆಗಳ ವಿವರ

* ಪ್ರೊಫೆಸರ್‌-2 ಹುದ್ದೆಗಳು
* ಅಸಿಸ್ಟೆಂಟ್‌ ಪ್ರೊಫೆಸರ್‌-7 ಹುದ್ದೆಗಳು
* ಅಸೋಸಿಯೇಟ್‌ ಪ್ರೊಫೆಸರ್‌-3 ಹುದ್ದೆಗಳು
* ಜೂನಿಯರ್‌ ರೆಸಿಡೆಂಟ್‌/ ಟ್ಯೂಟರ್‌-25 ಹುದ್ದೆಗಳು
* ಲೇಡಿ ಮೆಡಿಕಲ್‌ ಆಫೀಸರ್‌- 1 ಹುದ್ದೆ
* ಡಯಟಿಷಿಯನ್‌-1 ಹುದ್ದೆ
* ಕ್ಯಾಶ್ಯುವಲಿಟಿ ಮೆಡಿಕಲ್‌ ಆಫೀಸರ್‌-1 ಹುದ್ದೆ


ವಿದ್ಯಾರ್ಹತೆ
ಆಯಾ ಹುದ್ದೆಗೆ ಸಂಬಂಧಿಸಿದಂತೆ ಮೆಡಿಕಲ್‌ ಕೌನ್ಸೆಲ್‌ ಆಫ್‌ ಇಂಡಿಯಾ ನಿಗದಿಪಡಿಸಿದ ನಿಯಮಾನುಸಾರ ವಿದ್ಯಾರ್ಹತೆ ಹೊಂದಿರಬೇಕಾಗುತ್ತದೆ.

ಪ್ರೊಫೆಸರ್‌ ಹುದ್ದೆಗಳಿಗೆ ಅರ್ಹತೆ ಪಡೆಯಬೇಕಾದರೆ ಬೋಧನೆ ಮಾಡಲಿರುವ ವಿಷಯಗಳಿಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳು ಎಂಡಿ/ಎಂಎಸ್‌ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಮೂರು ವರ್ಷ ಯಾವುದಾದರೂ ವೈದ್ಯಕೀಯ ಕಾಲೇಜಿನಲ್ಲಿ ಅಸೋಸಿಯೇಟ್‌ ಪ್ರೊಫೆಸರ್‌ ಆಗಿ ಕೆಲಸ ಮಾಡಿರಬೇಕು.

ಅಸೋಸಿಯೇಟ್‌ ಪ್ರೊಫೆಸರ್‌ ಹುದ್ದೆಗಳ ಅಭ್ಯರ್ಥಿಗಳು ಕೂಡ ಸಂಬಂಧಪಟ್ಟ ವಿಷಯಗಳಲ್ಲಿ ಎಂಡಿ/ಎಂಎಸ್‌ ಜೊತೆಗೆ, ಅಸಿಸ್ಟೆಂಟ್‌ ಪ್ರೊಫೆಸರ್‌ ಆಗಿ ನಾಲ್ಕು ವರ್ಷ ಕೆಲಸ ಮಾಡಿರಬೇಕು.

ಅಸಿಸ್ಟೆಂಟ್‌ ಪ್ರೊಫೆಸರ್‌ ಆಗುವವರು ಎಂಡಿ/ಎಂಎಸ್‌ ಜೊತೆಗೆ ಮೂರು ವರ್ಷ ಜೂನಿಯರ್‌ ರೆಸಿಡೆಂಟ್‌ಗಳಾಗಿ ಕೆಲಸ ಮಾಡಿರಬೇಕು.ಇದರೊಂದಿಗೆ ರಿಸರ್ಚ್‌ ಪೇಪರ್‌ಗೆ ಸಂಬಂಧಪಟ್ಟಂತೆ ಪ್ರಕಟಣೆಗಳನ್ನು ಮಾಡಿರಬೇಕಾಗುತ್ತದೆ.

ಮೆಡಿಕಲ್‌ ಆಫೀಸರ್‌ ಹುದ್ದೆಗೆ ಎಂಬಿಬಿಎಸ್‌ ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದು, ಬಿಎಸ್ಸಿ (ಫುಡ್‌) ಪದವೀಧರರು ಡಯಟಿಷಿಯನ್‌ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ: ರೂ.500/-

ಬೋಧಕ-ಬೋಧಕರ ಹುದ್ದೆಗಳಿಗೆ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನ: 2-12-2017
ಸಂದರ್ಶನ ನಡೆಯುವ ದಿನ: 6-12-2017

ಅರ್ಜಿ ಸಲ್ಲಿಸುವ ವಿಳಾಸ
ನಿರ್ದೇಶಕರು, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಳಗಾವಿ

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ http://www.bimsbelgaum.org/walk-in-bims/walkin_Notification-06-12-2017.pdf

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಇಂಡಿಯನ್ ನೇವಿಯಲ್ಲಿ ಅರ್ಜಿ ಆಹ್ವಾನ... ಈ ಕೂಡಲೇ ಅರ್ಜಿ ಸಲ್ಲಿಸಿ!

ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಕೆಡೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 21, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇಂಡಿಯ...