ಬುಧವಾರ, ನವೆಂಬರ್ 1, 2017

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಎನ್ಇಇಟಿ-ಪಿಜಿ 2018

2018 ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳಿಗೆ ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್ಇಇಟಿ-ಪಿಜಿ)ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಎನ್ಇಇಟಿ-ಪಿಜಿ ಅನ್ನು ಎನ್ ಬಿ ಇ, ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ)ಯಾಗಿ 7ನೇ ಜನವರಿ 2018ರಂದು, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಒಂದೇ ಕಾಲಾವಧಿಯಲ್ಲಿ ನಡೆಸುತ್ತದೆ.


ಎನ್ಇಇಟಿ-ಪಿಜಿ 2018ಕ್ಕೆ ಅರ್ಹತಾ ಮಾನದಂಡ
ಭಾರತೀಯ ವೈದ್ಯಕೀಯ ಪರೀಷತ್ ಕಾಯಿದೆ ಅಡಿಯಲ್ಲಿ ಅಂಗೀಕೃತ ಮೆಡಿಕಲ್ ಕಾಲೇಜು/ಸಂಸ್ಥೆಯಿಂದ ಎಂಬಿಬಿಎಸ್ ಪದವಿ/ತಾತ್ಪೂರ್ತಿಕ ಎಂಬಿಬಿಎಸ್ ತೇರ್ಗಡೆ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು, ಭಾರತೀಯ ವೈದ್ಯಕೀಯ ಪರಿಷತ್ತು/ ರಾಜ್ಯ ವೈದ್ಯಕೀಯ ಪರಿಷತ್ತು ಎಂಬಿಬಿಎಸ್ ಅಥವಾ ತತ್ಸಮಾನ ವಿದ್ಯಾರ್ಹತೆಯ ಖಾಯಂ ಆಥವಾ ತಾತ್ಪೂರ್ತಿಕ ಪ್ರಮಾಣ ಪತ್ರ ಹೊಂದಿದ್ದು, 31 ಮಾರ್ಚ್ 2018 ರಂದು ಅಥವಾ ಮುಂಚಿತವಾಗಿ ಒಂದು ವರ್ಷದ ಇಂಟರ್ನ್ಸಿಪ್ ಮುಗಿಸುವ ಅಥವಾ ಮುಗಿಸಲಿರುವ ಅಭ್ಯರ್ಥಿಗಳು ಆನ್-ಲೈನ್ ಅರ್ಜಿ ವ್ಯವಸ್ಥೆ ಮೂಲಕ ಎನ್ಇಇಟಿ-ಪಿಜಿ ಅರ್ಜಿ ಸಲ್ಲಿಸಬಹುದು

ಎನ್ಇಇಟಿ-ಪಿಜಿ 2018ಕ್ಕೆ ಅರ್ಜಿ ಸಲ್ಲಿಕೆ

* ಅಭ್ಯರ್ಥಿಗಳು ಆನ್-ಲೈನ್ ಪೋರ್ಟಲ್ ಮೂಲಕ 31ನೇ ಅಕ್ಟೋಬರ್ 2017 ರಿಂದ 27ನೇ ನವೆಂಬರ್ 2017ರವರೆಗೆ ಎನ್ಇಇಟಿ-ಪಜಿಗೆ ನೋಂದಾಯಿಸಬಹುದು.
* ಅಭ್ಯರ್ಥಿಗಳು ಆನ್-ಲೈನ್ ನೋಂದಣಿ ವ್ಯವಸ್ಥೆ ಮೂಲಕ ಮೊದಲು ಬಂದವರಿಗೆ ಆದ್ಯತೆಯ ಆಧಾರದಲ್ಲಿ ಪರೀಕ್ಷೆಯ ನಗರವನ್ನು ಆಯ್ಕೆ ಮಾಡಬಹುದು.
ಪರೀಕ್ಷಾ ಶುಲ್ಕಾ

* ಸಾಮಾನ್ಯ ಮತ್ತು ಒಬಿಸಿ ಅಭ್ಯರ್ತಿಗಳಿಗೆ ರೂ.3750/-
* ಪ.ಜಾ/ಪ.ಪಂ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.2750/-

ಪರೀಕ್ಷಾ ಶುಲ್ಕವನ್ನು ಪೇಮೆಂಟ್ ಗೇಟ್ ವೇ ಮೂಲಕ, ಆನ್-ಲೈನ್ ಅರ್ಜಿ ಸಲ್ಲಿಸುವಾಗ, ಭಾರತದಲ್ಲಿ ಬ್ಯಾಂಕುಗಳಿಂದ ನೀಡಲ್ಪಟ್ಟ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿ, ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು

ಪ್ರಮುಖ ದಿನಾಂಕಗಳು

* ಅರ್ಜಿಯ ಅನ್-ಲೈನ್ ಸಲ್ಲಿಕೆ: 31-10-2017 ರಿಂದ 27-11-2017 ರವರೆಗೆ
* ಪರೀಕ್ಷೆಯ ದಿನಾಂಕ: 07-01-2018
* ಫಲಿತಾಂಶ ಘೋಷಣೆಯ ದಿನಾಂಕ: 31-01-2018ರ ವೇಳೆಗೆ


ಎನ್ಇಇಟಿ-ಪಿಜಿ ವಿವಿಧ ಎಂ.ಡಿ/ಎಂಎಸ್ ಮತ್ತು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸುಗಳ 2018 ರ ಪ್ರವೇಶಾಧಿವೇಶನಕ್ಕೆ ಅರ್ಹತೆ ಮತ್ತು ರ್ಯಾಂಕಿಂಗ್ ಗಳ ಏಕೈಕ ಪರೀಕ್ಷೆಯಾಗಿದೆ. ಯಾವುದೇ ರಾಜ್ಯ ಅಥವಾ ಸಂಸ್ಥಾ ಮಟ್ಟದಲ್ಲಿ ಬೇರೆ ಯಾವ ಪ್ರವೇಶ ಪರೀಕ್ಷೆಯು ಎಂಡಿ/ಎಂಎಸ್/ಪಿಜಿ ಡಿಪ್ಲೊಮಾ ಕೋರ್ಸುಗಳ ಪ್ರವೇಶಕ್ಕೆ ಅಧಿಕೃತವಲ್ಲ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಭಾರತ ಸರ್ಕಾರ ಇವರು, ಎನ್ಇಇಟಿ-ಪಿಜಿ 2018 ಅನ್ನು ಅಖಿಲ ಭಾರತೀಯ ಆಧಾರದಲ್ಲಿ ನಡೆಸುವಂತೆ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಅಧಿಸೂಚಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ https://drive.google.com/file/d/0B4yOsgzE4k20S0FGdkJSRFFMTlU/view

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಇಂಡಿಯನ್ ನೇವಿಯಲ್ಲಿ ಅರ್ಜಿ ಆಹ್ವಾನ... ಈ ಕೂಡಲೇ ಅರ್ಜಿ ಸಲ್ಲಿಸಿ!

ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಕೆಡೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 21, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇಂಡಿಯ...