ಶುಕ್ರವಾರ, ಅಕ್ಟೋಬರ್ 6, 2017

ಯುಪಿಎಸ್ಸಿ ಮುಖ್ಯ ಪರೀಕ್ಷೆ: ಪ್ರವೇಶ ಪತ್ರ ಡೌನ್ಲೋಡ್ ಗೆ ಲಭ್ಯ

ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ಮುಖ್ಯ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಆಯೋಗದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆಯಲಿದ್ದು, ಅಕ್ಟೋಬರ್ 28 ರಿಂದ ನವೆಂಬರ್ 3 ರವರೆಗು ಯುಪಿಎಸ್ಸಿ ಮುಖ್ಯ ಪರೀಕ್ಷೆಯು ನಡೆಯಲಿದೆ.
ಸುಮಾರು 980 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಪರೀಕ್ಷಾರ್ಥಿಗಳು ಪ್ರವೇಶ ಪತ್ರಗಳನ್ನು ಆಯೋಗದ ವೆಬ್ಸೈಟ್ ಮೂಲಕ ಪಡೆಯಬಹುದಾಗಿದೆ.
ಪ್ರವೇಶ ಪತ್ರ ಪಡೆಯುವ ವಿಧಾನ* ಕೇಂದ್ರ ಲೋಕ ಸೇವಾ ಆಯೋಗದ ವೆಬ್ಸೈಟ್ ಗೆ ಲಾಗಿನ್ ಆಗಿ
* ಆಗಿ ಇ ಅಡ್ಮಿಟ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ: http://www.upsc.gov.in/whats-new/Civil%20Services%20%28Main%29%20Examination%2C%202017/e%20-%20Admit%20Card
* ನೀಡಿರುವ ಸೂಚನೆಗಳನ್ನು ಸಂಪೂರ್ಣವಾಗಿ ಓದಿಕೊಳ್ಳಿ

* ನಿಮ್ಮ ನೋಂದಣಿ ಸಂಖ್ಯೆ ಅಥವಾ ರೋಲ್ ನಂಬರ್ ನಮೂದಿಸಿ ಪ್ರವೇಶ ಪತ್ರ ಪ್ರಿಂಟ್ ತೆಗೆದುಕೊಳ್ಳಿ

ಅಭ್ಯರ್ಥಿಗಳಿಗೆ ಸೂಚನೆ
* ಇ-ಅಡ್ಮಿಟ್ ಕಾರ್ಡ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ಯಾವುದಾದರೂ ವ್ಯತಿರಿಕ್ತತೆಗಳು ಇದ್ದರೆ ತಕ್ಷಣವೇ ಯುಪಿಎಸ್ಸಿಯ ಗಮನಕ್ಕೆ ತನ್ನಿ.
* ನಿಮ್ಮ ಹೆಸರು, ರೋಲ್ ಸಂಖ್ಯೆ, ನೋಂದಣಿ ಐಡಿ ಮತ್ತು ಹೆಸರನ್ನು ಯುಪಿಎಸ್ಸಿಯ ಎಲ್ಲಾ ಪತ್ರವ್ಯವಹಾರದಲ್ಲಿ ಉಲ್ಲೇಖಿಸಬೇಕು.
* ಪರಿಕ್ಷೆ ವೇಳೆ ಅಭ್ಯರ್ಥಿಯು ಇ-ಅಡ್ಮಿಟ್ ಕಾರ್ಡ್ ಅನ್ನು ಪರೀಕ್ಷಾ ಕೊಠಡಿಗೆ ಕಡ್ಡಾಯವಾಗಿ ಕೊಂಡೊಯ್ಯಬೇಕು. ಇ-ಅಡ್ಮಿಟ್ ಕಾರ್ಡ್ ಅನ್ನು ಲಿಖಿತ ಫಲಿತಾಂಶದ ಘೋಷಣೆಯಾಗುವವರೆಗೂ ಸಂರಕ್ಷಿಸಬಹುದು.
* ಪರೀಕ್ಷೆ ಶುರುವಾಗುವ 20 ನಿಮಿಷಗಳ ಮೊದಲು ಎಕ್ಸಾಮಿನೇಷನ್ ಹಾಲ್ ಅನ್ನು ಪ್ರವೇಶಿಸಬೇಕು.
* ಪರೀಕ್ಷೆ ಶುರುವಾದ 10 ನಿಮಿಷಗಳ ನಂತರ ನಿಮಗೆ ಪರೀಕ್ಷಾ ಕೊಠಡಿಗೆ ಪ್ರವೇಶವಿರುವುದಿಲ್ಲ.
* ಮೊಬೈಲ್ ಫೋನ್ಸ್ ಮತ್ತು ಇತರೆ ಎಲೆಕ್ಟ್ರಾನಿಕ್ಸ್ / ಸಂವಹನ ಸಾಧನಗಳ ಬಳಕೆಯನ್ನು ಪರೀಕ್ಷಾ ಆವರಣದಲ್ಲಿ ನಿಷೇಧಿಸಲಾಗಿದೆ.
* ಪರೀಕ್ಷೆ ಹಾಲ್ನಲ್ಲಿ ಯಾವುದೇ ಬೆಲೆಬಾಳುವ / ದುಬಾರಿ ವಸ್ತುಗಳನ್ನು ತರುವಂತಿಲ್ಲ.
* ಇ-ಅಡ್ಮಿಟ್ ಕಾರ್ಡ್ನಲ್ಲಿ ಸ್ಪಷ್ಟ ಛಾಯಾಚಿತ್ರಗಳನ್ನು ಹೊಂದಿಲ್ಲದ ಅಭ್ಯರ್ಥಿಗಳು ಫೋಟೋ ಗುರುತಿಸುವ ಪುರಾವೆ (ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ವೋಟರ್ ಐ ಕಾರ್ಡ್ ಇತ್ಯಾದಿ.) ತರಬೇಕಾಗುತ್ತದೆ ಜೊತೆಯಲ್ಲಿ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ತರಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಆಯೋಗದ ವೆಬ್ಸೈಟ್ ಗಮನಿಸಿ:http://www.upsc.gov.in/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಇಂಡಿಯನ್ ನೇವಿಯಲ್ಲಿ ಅರ್ಜಿ ಆಹ್ವಾನ... ಈ ಕೂಡಲೇ ಅರ್ಜಿ ಸಲ್ಲಿಸಿ!

ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಕೆಡೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 21, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇಂಡಿಯ...