ಏರ್ ಇಂಡಿಯಾ ಲಿಮಿಟೆಡ್ ನ ಏರ್ ಲೈನ್ ಅಲೈಡ್ ಸರ್ವಿಸಸ್ ಲಿ.,ನಲ್ಲಿ ಖಾಲಿ ಇರುವ 27 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಐದು ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ
ಅರ್ಹ ಅಭ್ಯರ್ಥಿಗಳು ವೆಬ್ಸೈಟ್ ಮೂಲಕ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿ, ಅರ್ಜಿ ಶುಲ್ಕದ ಡಿ.ಡಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ನಿಗದಿತ ದಿನಾಂಕದೊಳಗೆ ಕಚೇರಿ ವಿಳಾಸಕ್ಕೆ ತಲುಪಿಸತಕ್ಕದ್ದು.
ಅರ್ಜಿ ಶುಲ್ಕ
- ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.1500/-
- ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
ಅರ್ಜಿಗಳು ಕಚೇರಿ ತಲುಪಬೇಕಾದ ಕೊನೆಯ ದಿನಾಂಕ: 24-10-2017
ಹುದ್ದೆಗಳ ವಿವರ ಹುದ್ದೆಯ ಹೆಸರು ಹುದ್ದೆ ಸಂಖ್ಯೆ ವಯೋಮಿತಿ ಡೆಪ್ಯುಟಿ ಚೀಫ್ ಫೈನಾನ್ಷಿಯಲ್ ಆಫೀಸರ್ 01 45 ಚೀಫ್ ಪರ್ಸನಲ್ 01 45 ಸಿಂಥೆಟಿಕ್ ಫ್ಲೈಟ್ ಇನ್ಸ್ ಟ್ರಕ್ಟರ್ 03 70 ಮ್ಯಾನೇಜರ್ ಕಾರ್ಗೊ 01 40 ಮ್ಯಾನೇಜರ್ ಸೇಲ್ಸ್ ಅಂಡ್ ಮಾರ್ಕೆಟಿಂಗ್ 01 40 ಮ್ಯಾನೇಜರ್ ಎಂಎಂಡಿ 01 40 ಮ್ಯಾನೇಜರ್ ಸೆಕ್ಯುರಿಟಿ 01 40 ಇನ್ಸ್ ಟ್ರಕ್ಟರ್ (ಟೆಕ್ನಿಕಲ್) 02 50 ಅಸಿಸ್ಟೆಂಟ್ ಮ್ಯಾನೇಜರ್ (ಎಚ್ ಆರ್) 01 35 ಮ್ಯಾನೇಜರ್ ಕಾರ್ಪೊರೇಟರ್ ಕಮ್ಯುನಿಕೇಷನ್ 01 40 ಸ್ಟೇಷನ್ ಮ್ಯಾನೇಜರ್ 14 40 ವಿದ್ಯರ್ಹತೆ ಡೆಪ್ಯುಟಿ ಚೀಫ್ ಫೈನಾನ್ಷಿಯಲ್ ಆಫೀಸರ್ ಹುದ್ದೆಗೆ ಅಭ್ಯರ್ಥಿಗಳು ಸಿಎ ಪೂರ್ಣಗೊಳಿಸಿರಬೇಕು. ಕಾರ್ಪರೇಟ್ ಕಮ್ಯುನಿಕೇಷನ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಮಾಸ್ ಕಮ್ಯುನಿಕೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಟೆಕ್ನಿಕಲ್ ಇನ್ಸ್ ಟ್ರಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸವ ಅಭ್ಯರ್ಥಿಗಳು ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ಮುಗಿಸಿರಬೇಕು. ಉಳಿದ ಹುದ್ದೆಗಳಿಗೆ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ ಅಲೈಯನ್ಸ್ ಏರ್ ಪರ್ಸನಲ್ ಡಿಪಾರ್ಟ್ಮೆಂಟ್ ಅಲೈಯನ್ಸ್ ಭವನ ಟರ್ಮಿನಲ್-1ಬಿ, ಐಜಿಐ ಏರ್ಪೋಟ್ ನವದೆಹಲಿ-110037
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: http://www.airindia.in/writereaddata/Portal/career/516_1_Advertisements.pdf

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ